ಕಿಚಡಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ದೊಡ್ಡವರವರೆಗೂ ಇದನ್ನು ತಿನ್ನಬಹುದು. ಪ್ರೋಟೀನ್, ನಾರಿನಾಂಶ ಕೂಡ ಇದರಲ್ಲಿ ಹೆಚ್ಚಿರುತ್ತದೆ. ಮಾಡುವುದಕ್ಕೆ ಕೂಡ ಸುಲಭ. ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದೆ. ಸುಲಭವಾಗಿ ಪಾಲಾಕ್ ಕಿಚಡಿ ಮಾಡುವುದು ಹೇಗೆ ಎಂದು ತಿಳಿಯೋಣ .
ಬೇಕಾಗುವ ಸಾಮಾಗ್ರಿ: 1 ಕಪ್ ಹೆಸರುಬೇಳೆ, 1 ಕಪ್ ಅಕ್ಕಿ, 5 ಕಪ್ ನೀರು, ಚಿಟಿಕೆ ಅರಿಶಿನ, 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಟೊಮೆಟೊ, ½ ಕಟ್ ಪಾಲಾಕ್, ಹಸಿಮೆಣಸು 3, ಜೀರಿಗೆ 2 ಟೀ ಸ್ಪೂನ್, ½ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಒಂದು ಕುಕ್ಕರ್ ಗೆ ಹೆಸರುಬೇಳೆ, ಅಕ್ಕಿ, ಅರಿಶಿನ ಹಾಕಿ 5 ವಿಷಲ್ ಕೂಗಿಸಿಕೊಳ್ಳಿ.
ನಂತರ ಒಂದು ಬಾಣಲೆಗೆ ತುಪ್ಪ ಹಾಕಿಕೊಳ್ಳಿ. ಅದಕ್ಕೆ ಜೀರಿಗೆ ಹಾಕಿ, ಹಸಿಮೆಣಸು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಈರುಳ್ಳಿ ತುಸು ಕೆಂಪಗಾದ ನಂತರ ಟೊಮೆಟೋ ಹಾಕಿ.
ಇದು ಮೆದುವಾದ ನಂತರ ಸಣ್ಣಗೆ ಕತ್ತರಿಸಿಕೊಂಡ ಪಾಲಾಕ್ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಬೇಯಿಸಿಟ್ಟುಕೊಂಡ ಅಕ್ಕಿ ಹಾಗೂ ಹೆಸರುಬೇಳೆಯನ್ನು ಕೂಡ ಸೇರಿಸಿ. 5 ನಿಮಿಷ ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.