ಮಳೆಗಾಲ ಬಂದು ಬಿಟ್ಟಿದೆ. ಸಂಜೆ ಟೀ ಸಮಯಕ್ಕೆ ಏನಾದರೂ ಕುರುಕಲು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ರೆ ಚಕ್ಕುಲಿ. ಟೀ ಜತೆ ಸಖತ್ ಆಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
2 ಕಪ್ ನೀರು, 1 ಕಪ್ – ರವೆ, 2 ಟೇಬಲ್ ಸ್ಪೂನ್ – ಬೆಣ್ಣೆ, 2 ಕಪ್ ಅಕ್ಕಿ ಹಿಟ್ಟು, 1 ಟೇಬಲ್ ಸ್ಪೂನ್ – ಬಿಳಿ ಎಳ್ಳು, 1 ಟೀ ಸ್ಪೂನ್ – ಖಾರದಪುಡಿ, ಚಿಟಿಕೆ – ಇಂಗು, 1 ಟೀ ಸ್ಪೂನ್ – ಉಪ್ಪು, ¼ ಕಪ್ – ನೀರು, ಎಣ್ಣೆ – ಕರಿಯಲು.
ಮಾಡುವ ವಿಧಾನ:
ಒಂದು ಅಗಲವಾದ ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ನೀರು ಕುದಿದ ನಂತರ ಇದಕ್ಕೆ 1 ಕಪ್ ರವೆ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಬೆಣ್ಣೆ ಸೇರಿಸಿ ರವೆ ನೀರನ್ನೆಲ್ಲಾ ಸರಿಯಾಗಿ ಎಳೆದುಕೊಳ್ಳುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.
ಇದು ಬಾಣಲೆಯ ತಳ ಬಿಡುತ್ತಿದ್ದಂತೆ 2 ಕಪ್ ಅಕ್ಕಿ ಹಿಟ್ಟು, ಎಳ್ಳು, ಖಾರದಪುಡಿ, ಇಂಗು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ¼ ಕಪ್ ನೀರು ಸೇರಿಸಿ ಚಕ್ಕುಲಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ನಂತರ ಚಕ್ಕುಲಿ ಅಚ್ಚಿಗೆ ಹಾಕಿ ಕಾದ ಎಣ್ಣೆಯಲ್ಲಿ ಕರಿಯಿರಿ.