alex Certify ಸುಲಭವಾಗಿ ಮಾಡಿ ಕುಡಿಯಿರಿ ಜಲ್ ಜೀರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ಕುಡಿಯಿರಿ ಜಲ್ ಜೀರಾ

ಪುದೀನಾ, ಕೊತ್ತಂಬರಿ ಸೊಪ್ಪು ಹಾಗೂ ಸಾಂಬಾರು ಪದಾರ್ಥಗಳನ್ನು ಬಳಸಿ ಮಾಡುವ ಜಲ್ ಜೀರಾ ಪಾನೀಯ ತುಂಬಾ ರುಚಿಕರವಾದದ್ದು. ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥ:

ಕೊತ್ತಂಬರಿ ಸೊಪ್ಪು – 1 ಕಪ್, ಪುದೀನಾ-1 ಕಪ್, ಸಕ್ಕರೆ – 1/2 ಸ್ಪೂನ್, ಚಾಟ್ ಮಸಾಲ ಪುಡಿ – 1.5 ಟೀ ಸ್ಪೂನ್, ಜೀರಿಗೆಪುಡಿ – 1.5 ಟೀ ಸ್ಪೂನ್, ಹುಣಸೆಹಣ್ಣು – 1 ನೆಲ್ಲಿಕಾಯಿ ಗಾತ್ರದ್ದು, ಉಪ್ಪು – 1 ಟೀ ಸ್ಪೂನ್, ಶುಂಠಿ – ಅರ್ಧ ಇಂಚು ಸಣ್ಣಗೆ ಹೆಚ್ಚಿದ್ದು, ತಣ್ಣಗಿನ ನೀರು – ಅಗತ್ಯವಿರುವಷ್ಟು, ಐಸ್ ಕ್ಯೂಬ್ಸ್.

ಮಾಡುವ ವಿಧಾನ:

ಒಂದು ಮಿಕ್ಸಿ ಜಾರಿಗೆ ಈ ಎಲ್ಲಾ ವಸ್ತುಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಶೋಧಿಸಿಕೊಳ್ಳಿ. ನಂತರ ನಿಮಗೆ ಅಗತ್ಯವಿರುವಷ್ಟು ನೀರು, ಐಸ್ ಕ್ಯೂಬ್ಸ್ ಹಾಕಿ ಸರ್ವ್ ಮಾಡಿ.

ಇದನ್ನು ಒಂದು ಬಾಟಲಿಗೆ ಹಾಕಿ ನೀವು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಡಬಹುದು. ಬೇಕಾದಾಗ ನೀರು, ಐಸ್ ಕ್ಯೂಬ್ಸ್ ಸೇರಿಸಿ ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...