½ ಕೆ.ಜಿ. ಕೋಳಿ ಮಾಂಸ, 50 ಗ್ರಾಂ ಎಣ್ಣೆ, 50 ಗ್ರಾಂ ಈರುಳ್ಳಿ, 50 ಗ್ರಾಂ ಕ್ಯಾರೆಟ್, 1 ಸ್ಪೂನ್ ಕರಿಮೆಣಸಿನ ಪುಡಿ, 50 ಗ್ರಾಂ ದೊಣ್ಣೆ ಮೆಣಸಿನಕಾಯಿ, 50 ಗ್ರಾಂ ಬೀನ್ಸ್, ½ ಕೆ.ಜಿ. ಜೀರಾ ರೈಸ್, 2 ಮೊಟ್ಟೆ, ಚಿಟಿಕೆ ಅಜಿನೊಮೊಟೊ, ಸೋಯಾಸಾಸ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ಮೊದಲಿಗೆ ಕೋಳಿ ಮಾಂಸವನ್ನು ಬೇಯಿಸಿಕೊಂಡು ಮೂಳೆ ತೆಗೆದು ಸಣ್ಣದಾಗಿ ತುಂಡರಿಸಿ ಇಟ್ಟುಕೊಳ್ಳಿ. ಅಕ್ಕಿಯನ್ನು ಮುಕ್ಕಾಲು ಭಾಗ ಬೇಯಿಸಿ ಇಡಿ.
ಕ್ಯಾರೆಟ್, ಬೀನ್ಸ್ ಸಣ್ಣಗೆ ಕತ್ತರಿಸಿ ಬೇಯಿಸಿಕೊಳ್ಳಿ. ಈರುಳ್ಳಿ ಮತ್ತು ದೊಣ್ಣೆ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ. 2 ನಿಮಿಷವಾದ ನಂತರ ಮೊಟ್ಟೆಯನ್ನು ಒಡೆದು ಹಾಕಿ, ತಿರುಗಿಸಿರಿ. ಅದಕ್ಕೆ ಬೇಯಿಸಿದ ಅನ್ನ, ತರಕಾರಿ, ಚಿಕನ್ ಹಾಕಿ ಕೆಲವು ನಿಮಿಷಗಳ ಕಾಲ ತಿರುಗಿಸಿ ಚೆನ್ನಾಗಿ ಮಿಕ್ಸ್ ಮಾಡಿರಿ. ಸ್ವಲ್ಪ ಸಮಯದ ನಂತರ ಬಿಸಿಬಿಸಿಯಾಗಿ ಸೋಯಾಸಾಸ್ ನೊಂದಿಗೆ ತಿನ್ನಲು ಕೊಡಿ.