ರಾಗಿ ಹಿಟ್ಟು -1 ಕೆ.ಜಿ., ಉಪ್ಪು -3 ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ -4, ಕೊತಂಬರಿ ಸೊಪ್ಪು -1 ಕಟ್ಟು, ಹೆಚ್ಚಿದ ಹಸಿ ಮೆಣಸಿನ ಕಾಯಿ -10 ಗ್ರಾಂ, ಕೊಬ್ಬರಿ ತುರಿ -100 ಗ್ರಾಂ, ಜೀರಿಗೆ -10 ಗ್ರಾಂ, ನೀರು -2 ಲೀಟರ್, ಎಣ್ಣೆ -300 ಗ್ರಾಂ.
ತಯಾರಿಸುವ ವಿಧಾನ:
ಅಗಲವಾದ ಸ್ಟೀಲ್ ಪಾತ್ರೆಗೆ ಒಂದೊಂದೇ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ. ನೀರನ್ನು ಹಾಕಿ ಚೆನ್ನಾಗಿ ಕಲೆಸಿ, ದೋಸೆ ಹಿಟ್ಟು ಮಾಡಿ 30 ನಿಮಿಷ ಹಾಗೆಯೇ ಬಿಡಿ.
ಕಾವಲಿಯನ್ನು ಒಲೆಯ ಮೇಲಿಟ್ಟು ಕಾಯಿಸಿ. ಸೌಟಿನಿಂದ ಹಿಟ್ಟು ತೆಗೆದುಕೊಂಡು ಅಗಲವಾಗಿ ದೋಸೆ ಹಾಕಿರಿ. ಚಮಚದಿಂದ 2 -3 ಸಲ ಎಣ್ಣೆ ಹಾಕಿ ಬೇಯಿಸಿರಿ.
ದೋಸೆ ಎರಡೂ ಬದಿಯಲ್ಲಿ ಬೆಂದ ಬಳಿಕ ಕಾವಲಿಯಿಂದ ತೆಗೆದು ತಟ್ಟೆಗೆ ಹಾಕಿರಿ. ಬಿಸಿ ಇರುವಾಗಲೇ ಚಟ್ನಿ ಇಲ್ಲವೇ ಚಟ್ನಿ ಪುಡಿಯೊಂದಿಗೆ ಬಡಿಸಿರಿ. ಬೇಕಾದಲ್ಲಿ ಬಿಸಿ ದೋಸೆ ಮೇಲೆ ಬೆಣ್ಣೆ ಹಾಕಬಹುದಾಗಿದೆ.