
ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಅದ್ರ ಲೋಳೆ ಕಿರಿಕಿರಿಯುಂಟು ಮಾಡುತ್ತದೆ. ಬೆಂಡೆಕಾಯಿಯನ್ನು ಸರಿಯಾಗಿ ಕತ್ತರಿಸಲು ಬರೋದಿಲ್ಲ ಎಂಬ ದೂರು ಅನೇಕರದ್ದು. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ಅನುಸರಿಸಿದ್ರೆ ಬೆಂಡೆಕಾಯಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಬಹುದು.
ಮಾರುಕಟ್ಟೆಯಿಂದ ತರುವ ಬೆಂಡೆಕಾಯಿಯನ್ನು ಸ್ವಚ್ಛವಾಗಿ ತೊಳೆಯಿರಿ. ನಂತ್ರ ಬಟ್ಟೆಯಿಂದ ನೀರನ್ನು ಒರೆಸಿಕೊಳ್ಳಿ. ನಂತ್ರ ಬೆಂಡೆಕಾಯಿಯನ್ನು ಚಾಕುವಿನಿಂದ ಕತ್ತರಿಸಿ.
ಚಾಕುವಿನಿಂದ ಬೆಂಡೆಕಾಯಿ ಕತ್ತರಿಸುವ ವೇಳೆ ಆಗಾಗ ಚಾಕುವನ್ನು ಕ್ಲೀನ್ ಮಾಡುತ್ತಿರಿ.
ಚಾಕುವಿಗೆ ಲಿಂಬೆ ರಸವನ್ನು ಸವರಿ ನಂತ್ರ ಬೆಂಡೆಕಾಯಿ ಕತ್ತರಿಸುವುದರಿಂದ ಬೆಂಡೆಕಾಯಿಯಲ್ಲಿರುವ ಲೋಳೆ ಹೊರಗೆ ಬರುವುದಿಲ್ಲ.
ಚಾಕುವಿಗೆ ಎಣ್ಣೆ ಸವರಿ ಬೆಂಡೆಕಾಯಿ ಕತ್ತರಿಸಬಹುದು. ಹೀಗೆ ಮಾಡಿದ್ರೆ ಬೆಂಡೆಕಾಯಿ ಚಾಕುವಿಗೆ ಅಂಟಿಕೊಳ್ಳುವುದಿಲ್ಲ.
ಬೆಂಡೆಕಾಯಿ ಸಬ್ಜಿ ಮಾಡುವ ವೇಳೆ ಸ್ವಲ್ಪ ಮೊಸರು ಸೇರಿಸಿದ್ರೆ ಬೆಂಡೆಕಾಯಿ ಪಾತ್ರೆಯ ತಳ ಹಿಡಿಯುವುದಿಲ್ಲ.