ಎಲೆಕೋಸಿನ ತುರಿ 1 1/2 ಕಪ್
ಹುಣಸೆ ಹಣ್ಣಿನ ರಸ 1 ಚಮಚ
ಹಸಿಮೆಣಸಿನಕಾಯಿ 4
ಜೀರಿಗೆ 1/4 ಚಮಚ
ಅರಿಶಿಣ ಸ್ವಲ್ಪ
ಒಗ್ಗರಣೆಗೆ
ಒಣಮೆಣಸಿನಕಾಯಿ, ಉದ್ದಿನಬೇಳೆ, ಕಡಲೆಬೇಳೆ, ಜೀರಿಗೆ, ಸಾಸಿವೆ, ಉಪ್ಪು, ಎಣ್ಣೆ, ಬೆಳ್ಳುಳ್ಳಿ ಎಸಳು.
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಕ್ಯಾಬೇಜ್ ತುರಿ, ಹಸಿ ಮೆಣಸಿನಕಾಯಿ, ಅರಿಶಿಣ ಹಾಕಿ ಚೆನ್ನಾಗಿ ಬೇಯಿಸಿ.
ನಂತರ ಹುಣಸೆಹಣ್ಣು ನೆನಸಿ ಸೋಸಿದ ರಸ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಅದರಲ್ಲಿ ಹಾಕಿ ಕೈಯಾಡಿಸಿ.
ಮಿಶ್ರಣ ತಣ್ಣಗಾದ ಬಳಿಕ ನುಣ್ಣಗೆ ರುಬ್ಬಿಕೊಳ್ಳಿ. ತಯಾರಾದ ಚಟ್ನಿಗೆ ಒಗ್ಗರಣೆ ಹಾಕಿ ಸವಿದರೆ ರುಚಿಯಾಗಿರುತ್ತದೆ.