150 ಗ್ರಾಂ ನೂಡಲ್ಸ್
ಮೂರು ಟೊಮ್ಯಾಟೊ
ಒಂದು ಕ್ಯಾರೆಟ್, ಕ್ಯಾಪ್ಸಿಕಂ, ಶುಂಠಿ
ಅರ್ಧ ಕಪ್ ಅವರೆಕಾಳು
ಅರ್ಧ ಚಮಚ ಕರಿಮೆಣಸಿನ ಪುಡಿ
ಅರ್ಧ ಚಮಚ ಬಿಳಿ ಮೆಣಸಿನ ಪುಡಿ
ಎರಡು ಹಸಿ ಮೆಣಸಿನ ಕಾಯಿ
ಅರ್ಧ ಚಮಚ ನಿಂಬೆ ರಸ
ಎರಡು ಚಮಚ ಬೆಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು
ತರಕಾರಿ ನೂಡಲ್ಸ್ ಮಾಡುವ ವಿಧಾನ :
ಮೊದಲು ಟೊಮ್ಯಾಟೊ, ಕ್ಯಾರೆಟ್, ಕ್ಯಾಪ್ಸಿಕಂ ಹಾಗೂ ಶುಂಠಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಂದು ಪ್ಯಾನ್ ಗೆ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ. ಇದಕ್ಕೆ ಹಸಿ ಮೆಣಸು ಹಾಗೂ ಶುಂಠಿಯನ್ನು ಹಾಕಿ. ನಂತ್ರ ಹೆಚ್ಚಿದ ತರಕಾರಿಗಳನ್ನು ಹಾಕಿ. ಉಪ್ಪನ್ನು ಸೇರಿಸಿ. ತರಕಾರಿ ಚೆನ್ನಾಗಿ ಹುರಿದ ನಂತ್ರ ಎರಡು ಲೋಟ ನೀರನ್ನು ಹಾಕಿ, ಕುದಿಸಿ. ಇದಕ್ಕೆ ನೂಡಲ್ಸ್ ಹಾಕಿ. ಶಾಖವನ್ನು ಕಡಿಮೆ ಮಾಡಿ ಐದು ನಿಮಿಷಗಳ ಕಾಲ ಬೇಯಿಸಿ. ಆಗಾಗ ಕೈ ಆಡಿಸುತ್ತಿರಿ. ನಂತ್ರ ರುಚಿಗೆ ತಕ್ಕಷ್ಟು ಮೆಣಸಿನ ಪುಡಿ ಹಾಗೂ ಉಪ್ಪನ್ನು ಸೇರಿಸಿ.
ಐದು ನಿಮಿಷ ಕುದಿಸಿ. ನಂತ್ರ ಗ್ಯಾಸ್ ಬಂದ್ ಮಾಡಿ, ನಿಂಬೆ ರಸವನ್ನು ಸೇರಿಸಿ. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನು ಬಳಸಿ.