ಈಗ ಐ ಮೇಕಪ್ ನ ಜಮಾನ. ಮೊದಲೆಲ್ಲಾ ಕಣ್ಣಿಗೆ ಕಾಡಿಗೆ ಹಚ್ಚಿ ಬಿಡುತ್ತಿದ್ದರು. ಈಗ ಅದರಲ್ಲಿ ನಾನಾ ತರಹದ ವಿನ್ಯಾಸಗಳನ್ನು ಮಾಡುತ್ತಾರೆ. ಐ ಶ್ಯಾಡೊ, ಐ ಲೈನರ್ ಬಳಸುತ್ತಾರೆ.
ಆದರೆ ಇದನ್ನು ಕ್ಲೀನ್ ಮಾಡುವುದೇ ಕಷ್ಟ.
ಸುಲಭವಾಗಿ ಐ ಮೇಕಪ್ ಅನ್ನು ಹೇಗೆ ರಿಮೂವ್ ಮಾಡಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
*ತೆಂಗಿನೆಣ್ಣೆಯನ್ನು ಕಣ್ಣುಗಳ ರೆಪ್ಪೆ ಮೇಲೆ ನಿಧಾನಕ್ಕೆ ಉಜ್ಜಿ. ನಂತರ ಒಂದು ಒಂದು ಹತ್ತಿಯ ಉಂಡೆ ತೆಗೆದುಕೊಂಡು ಮೇಕಪ್ ಅನ್ನು ರಿಮೂವ್ ಮಾಡಿ. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ. ಎಣ್ಣೆ ಕಣ್ಣಿನ ಒಳಗೆ ಹೋಗದಂತೆ ಜಾಗೃತೆ ವಹಿಸಿ.
ಆಲಿವ್ ಎಣ್ಣೆ ಯನ್ನು ಬೆರಳಿಗೆ ಹಚ್ಚಿಕೊಂಡು ಕಣ್ಣಿನ ಸುತ್ತ ನಿಧಾನಕ್ಕೆ ಮಸಾಜ್ ಮಾಡಿ. ಆಮೇಲೆ ಹತ್ತಿಯ ಸಹಾಯದಿಮದ ಮೇಕಪ್ ತೆಗೆಯಿರಿ. ಇದು ಸೂಕ್ಷ್ಮ ತ್ವಚೆಯವರಿಗೆ ಹೇಳಿ ಮಾಡಿಸಿದ್ದು.
*ಇನ್ನು ವ್ಯಾಸಲಿನ್ ಅನ್ನು ಸ್ವಲ್ಪ ತೆಗೆದುಕೊಂಡು ಕಣ್ಣಿನ ಸುತ್ತಲಿನ ಪ್ರದೇಶಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ ಹತ್ತಿಯಿಂದ ಕ್ಲೀನ್ ಮಾಡಿದರೆ ಕಣ್ಣಿನ ಮೇಕಪ್ ಸುಲಭವಾಗಿ ಹೋಗುತ್ತದೆ. ಕಣ್ಣಿಗೂ ಯಾವುದೇ ಹಾನಿಯಿಲ್ಲ.
* ಇನ್ನುಎಣ್ಣೆ ಆಗದವರು ಸೌತೆಕಾಯಿ ರಸ ಬಳಸಿ ನಿಧಾನಕ್ಕೆ ಕಣ್ಣಿನ ಮೇಕಪ್ ತೆಗೆಯಬಹುದು. ಮೇಕಪ್ ತೆಗೆದ ನಂತರ ಕಣ್ಣಿನ ಮೇಲೆ ಸೌತೆಕಾಯಿ ಪೀಸ್ ಅನ್ನು ಇಟ್ಟುಕೊಂಡು ಮಲಗಿದರೆ ಕಣ್ಣಿಗೆ ಆರಾಮದಾಯಕವಾಗುತ್ತದೆ.
* ಮೇಕಪ್ ಎಲ್ಲಾ ತೆಗೆದು ಮೇಲೆ ಐ ಕ್ರೀಮ್ ಹಚ್ಚುವುದನ್ನು ಮರೆಯಬೇಡಿ. ಇದು ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುತ್ತದೆ.