
ಸುರಕ್ಷಿತ ಲೈಂಗಿಕ ಜೀವನಕ್ಕೆ ಕಾಂಡೋಮ್ ಅಗತ್ಯ. ಕಾಂಡೋಮ್ ಬಳಕೆಯಿಂದ ಅನಗತ್ಯ ಗರ್ಭಧಾರಣೆ ತಡೆ ಜೊತೆಗೆ ಯಾವುದೇ ಸೋಂಕು ತಾಗದಂತೆ ತಡೆಯುತ್ತದೆ. ಆದ್ರೆ ಕಾಂಡೋಮ್ ಬಳಸುವ ವೇಳೆ ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.
ಕಾಂಡೋಮ್ ಬಳಸುವ ವೇಳೆ ಉಗುರು, ಹಲ್ಲನ್ನು ಬಳಸಬಾರದು. ಹಲ್ಲಿನಿಂದ ಅಥವಾ ಉಗುರಿನಿಂದ ಪ್ಯಾಕೆಟ್ ಹರಿದ್ರೆ ಕಾಂಡೋಮ್ ಹಾಳಾಗುವ ಸಾಧ್ಯತೆಯಿರುತ್ತದೆ.
ಕಾಂಡೋಮ್ ಬಳಕೆ ವೇಳೆ ಯಾವಾಗ್ಲೂ ಪರೀಕ್ಷೆ ಮಾಡಿ. ಕಾಂಡೋಮ್ ಹಾಳಾಗಿದೆಯಾ ಎಂಬುದನ್ನು ಪರೀಕ್ಷೆ ಮಾಡಿಯೇ ಬಳಸಿ.
ಸಂಭೋಗದ ಮಧ್ಯೆ ಕಾಂಡೋಮ್ ಬಳಸುವವರಿದ್ದಾರೆ. ಇದು ತಪ್ಪು, ಸಂಭೋಗ ಬೆಳೆಸುವ ಮೊದಲೇ ಕಾಂಡೋಮ್ ಬಳಸಿ.
ಒಮ್ಮೆ ಬಳಸಿದ ಕಾಂಡೋಮನ್ನು ಎರಡನೇ ಬಾರಿ ಅಪ್ಪಿತಪ್ಪಿಯೂ ಬಳಸಬೇಡಿ.
ಕಾಂಡೋಮ್ ಖರೀದಿ ವೇಳೆ ಪ್ಯಾಕೆಟ್ ಮೇಲಿನ ದಿನಾಂಕವನ್ನು ಪರಿಶೀಲಿಸಿ. ದಿನಾಂಕ ಮುಗಿದ ಕಾಂಡೋಮ್ ಬಳಸಬೇಡಿ.