ಇರಲಾರದೇ ಇರುವೆ ಬಿಟ್ಟುಕೊಳ್ಳೋದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಜಾರ್ಜಿಯಾದ ಒಂದು ಪ್ರದೇಶದಲ್ಲಿನ ಪಾತಕಿಗಳನ್ನ ಪಟ್ಟಿ ಮಾಡಿ ಮೋಸ್ಟ್ ವಾಂಟೆಡ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾಕಲಾಗಿತ್ತು. ಇದಕ್ಕೆ ರಿಪ್ಲೈ ಕೊಟ್ಟ ಒಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಜಾರ್ಜಿಯಾದ ರಾಕ್ ಡೆಲಿ ಕಂಟ್ರಿ ಶೆರಿಫ್ ಕಚೇರಿಯ ಫೇಸ್ ಬುಕ್ ನಲ್ಲಿ ವಾಂಟೆಡ್ ಲಿಸ್ಟ್ ಹಾಕಲಾಗಿತ್ತು. ಇದಕ್ಕೆ “ಹೌ ಎಬೌಟ್ ಮಿ” ಎಂದು ಕಾಮೆಂಟ್ ಮಾಡಿದ ನಂತರ ಜಾರ್ಜಿಯಾ ವ್ಯಕ್ತಿಯನ್ನು ಬಂಧಿಸಲಾಯಿತು.
ರಾಕ್‌ಡೇಲ್ ಕೌಂಟಿ ಶೆರಿಫ್‌ನ ಕಚೇರಿಯು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯನ್ನು ಪೋಸ್ಟ್ ಮಾಡಿ ಅಪರಾಧಿಗಳ ಪಟ್ಟಿಯನ್ನ ನವೀಕರಿಸಲಾಗುವುದು ಎಂದು ಪೋಸ್ಟ್ ಮಾಡಲಾಗಿತ್ತು.
ಪಟ್ಟಿಯಲ್ಲಿ ತನ್ನ ಹೆಸರಿಲ್ಲದ ಕ್ರಿಸ್ಟೋಫರ್ ಸ್ಪಾಲ್ಡಿಂಗ್, ಪೋಸ್ಟ್‌ನ ಅಡಿಯಲ್ಲಿ “ನನ್ನ ಬಗ್ಗೆ ಹೇಗೆ” ಎಂದು ಕಾಮೆಂಟ್ ಮಾಡಿದ. ತಕ್ಷಣ ರಾಕ್ ಡೆಲಿ ಕಂಟ್ರಿ ಶೆರಿಫ್ ಕಚೇರಿಯ ಕಛೇರಿಯು ಉತ್ತರಿಸಿ, “ನೀವು ಹೇಳಿದ್ದು ಸರಿಯಾಗಿದೆ. ನಿಮ್ಮ ಮೇಲೆ ಎರಡು ವಾರಂಟ್‌ಗಳಿವೆ, ನಾವು ಬರುತ್ತಿದ್ದೇವೆ” ಎಂದಿದೆ.
ಪೋಲೀಸರ ಹೇಳಿಕೆಯಂತೆ ಎರಡು ವಾರಂಟ್‌ಗಳ ಉಲ್ಲಂಘನೆಯನ್ನು ಹೊಂದಿದ್ದ ಸ್ಪಾಲ್ಡಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ. “ನಿಮ್ಮ ಸೆರೆ ಹಿಡಿಯುವಿಕೆಯಲ್ಲಿ ನಿಮ್ಮ ಸಹಾಯಕ್ಕಾಗಿ ನಾವು ನಿಮ್ಮನ್ನು ಪ್ರಶಂಸಿಸುತ್ತೇವೆ” ಎಂದು ಕ್ರಿಸ್ಟೋಫರ್ ಸ್ಪಾಲ್ಡಿಂಗ್ ಗೆ ಬಿಸಿ ಮುಟ್ಟಿಸಿದೆ.