ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ದರ್ಬಾರ್ ಶುರುವಾಗ್ತಾ ಇದೆ. ಅದರಲ್ಲೂ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಒಂದಾದ ಮೇಲೊಂದರಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಸುಜುಕಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಎಲ್ಲರ ಗಮನ ಸೆಳೆಯುತ್ತಿದೆ.
ಜಪಾನ್ ಮೂಲದ ಈ ಕಂಪನಿ ಭಾರತೀಯ ಮಾರುಕಟ್ಟೆಗಾಗಿಯೇ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅಭಿವೃದ್ಧಿಪಡಿಸಿದೆ. ಸುಜುಕಿ ಕಂಪನಿಯ ದ ಬರ್ಗ್ ಮನ್ ಸ್ಟ್ರೀಟ್ 125 ಎಲೆಕ್ಟ್ರಿಕ್ ಸ್ಕೂಟರ್ ಬೆಸ್ಟ್ ಸೆಲ್ಲರ್ ಎನಿಸಿಕೊಂಡಿದೆ. ಇದೀಗ ಬರ್ಗ್ ಮನ್ ಸ್ಕೂಟರ್ ಅನ್ನೇ ಹೋಲುವ ಮತ್ತೊಂದು ಸ್ಕೂಟರ್ ಪ್ರಾಯೋಗಿಕ ಚಾಲನೆ ಸಂದರ್ಭದಲ್ಲಿ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ.
ವಾಹನ ಪ್ರಿಯರೊಬ್ಬರು ಫೋಟೋಗಳನ್ನು ಸೆರೆಹಿಡಿದಿದ್ದಾರೆ. ನೀಲಿ ಹಾಗೂ ಬಿಳಿ ಬಣ್ಣದ ಈ ಸ್ಕೂಟರ್ ಸಾಕಷ್ಟು ಆಕರ್ಷಕವಾಗಿದೆ. ಈ ಸ್ಕೂಟರ್ ನಲ್ಲಿ ಎಕ್ಸ್ ಹಾಸ್ಟ್ ಕನ್ಸಿಸ್ಟರ್ ಇಲ್ಲ ಅನ್ನೋದು ಗಮನಕ್ಕೆ ಬಂದಿದೆ. ಇದರಲ್ಲಿ ಅವಳಿ ಶಾಕ್ ಅಬ್ಸರ್ವರ್ ಗಳನ್ನು ಅಳವಡಿಸಲಾಗಿದೆ.
ಸ್ಕೂಟರ್ ನ ಇಂಟಿರೀಯಿಯರ್ ಬಹುತೇಕ ಬರ್ಗ್ ಮನ್ ಸ್ಟ್ರೀಟ್ ನಂತೆಯೇ ಇದೆ. ಇದರಲ್ಲಿ ಬ್ಲೂಟೂತ್, ಟರ್ನ್ ಬೈ ಟರ್ನ್ ನೇವಿಗೇಶನ್, ಯು ಎಸ್ ಬಿ ಚಾರ್ಜರ್, ಎಲ್ ಇ ಡಿ ಹೆಡ್ ಲೈಟ್, ಅಂಡರ್ ಸೀಟ್ ನಲ್ಲಿ ದೊಡ್ಡದಾದ ಸ್ಟೋರೇಜ್ ಅಳವಡಿಸಿರುವ ಸಾಧ್ಯತೆ ಇದೆ.