ವಾಸ್ತು ದೋಷದಿಂದ ಸುಖ-ಸಮೃದ್ಧಿ ನಾಶವಾಗುತ್ತದೆ. ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ವಾಸ್ತು ದೋಷವಿದೆ ಎನ್ನುವ ಕಾರಣಕ್ಕೆ ಜನರು ಮನೆ ಒಡೆಯಲೂ ಮುಂದಾಗ್ತಾರೆ. ಆದ್ರೆ ಮನೆ ಒಡೆಯಬೇಕಾಗಿಲ್ಲ.
ಕೆಲ ಸರಳ ಉಪಾಯಗಳನ್ನು ಅನುಸರಿಸಿ ವಾಸ್ತು ದೋಷವನ್ನು ಕಡಿಮೆ ಮಾಡಬಹುದಾಗಿದೆ.
ನೀರಿಗೆ ಅರಿಶಿನವನ್ನು ಬೆರೆಸಿ ವೀಳ್ಯದೆಲೆ ಸಹಾಯದಿಂದ ಮನೆಗೆಲ್ಲ ಸಿಂಪಡಿಸಿ.
ಪ್ರತಿ ದಿನ ದೇವರ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ.
ಮನೆಯ ಈಶಾನ್ಯ ದಿಕ್ಕನ್ನು ಸ್ವಚ್ಛಗೊಳಿಸಿ ಸುಂದರವಾಗಿಡಿ. ಇದು ಮನೆಯಲ್ಲಿ ಶುಭ ಕೆಲಸ ನಡೆಯಲು ಕಾರಣವಾಗುತ್ತದೆ.
ದೇವರ ಪೂಜೆ ಮಾಡಿದ ಹೂವನ್ನು ದೇವರ ಮನೆಯಲ್ಲಿಡಬೇಡಿ.
ಈಶಾನ್ಯ ಮೂಲೆಯಲ್ಲಿ ಅಧಿಕ ತೂಕದ ವಸ್ತುಗಳನ್ನು ಇಡಬೇಡಿ.
ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನಿಡಿ.
ಮನೆಯ ಗೋಡೆ ಮೇಲೆ ಹಸಿರು, ಸುಂದರ ಫೋಟೋಗಳನ್ನು ಹಾಕಿ.