ಎಂದೂ ಉಲ್ಟಾ ಸ್ವಸ್ತಿಕ ಬಿಡಿಸಬಾರದು ಎನ್ನಲಾಗುತ್ತದೆ. ಸ್ವಸ್ತಿಕ್ ಸಂಸ್ಕೃತ ಶಬ್ಧವಾಗಿದ್ದು, ಶುಭವಾಗಲಿ, ಕಲ್ಯಾಣವಾಗಲಿ ಎಂಬುದು ಇದ್ರ ಅರ್ಥ. ಪ್ರತಿಯೊಂದು ಶುಭ ಕಾರ್ಯದ ವೇಳೆಯೂ ಸ್ವಸ್ತಿಕವನ್ನು ರಚಿಸಲಾಗುತ್ತದೆ. ಸ್ವಸ್ತಿಕ ತಾಯಿ ಲಕ್ಷ್ಮಿ ಹಾಗೂ ಗಣೇಶನ ಸಂಕೇತವಾಗಿದೆ.
ವ್ಯಾಪಾರದಲ್ಲಿ ವೃದ್ಧಿ ಬಯಸುವವರು ಗುರುವಾರ ಮನೆಯ ಈಶಾನ್ಯ ಕೋಣೆಯಲ್ಲಿ ನೆಲವನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಅರಿಶಿನದಿಂದ ಸ್ವಸ್ತಿಕವನ್ನು ಬಿಡಿಸಬೇಕು. ನಂತ್ರ ಪೂಜೆ ಮಾಡಿ, ಬೆಲ್ಲವನ್ನು ಅರ್ಪಿಸಬೇಕು. ಸತತ 7 ಗುರುವಾರ ಇದನ್ನು ಮಾಡಬೇಕು.
ಮನೆಯ ಸಮೃದ್ಧಿಗಾಗಿ ಮನೆಯ ಮುಖ್ಯದ್ವಾರದ ಮುಂದೆ ಅರಿಶಿನ, ಕುಂಕುಮ ಅಥವಾ ರಂಗೋಲಿಯಿಂದ ಸ್ವಸ್ತಿಕವನ್ನು ಬಿಡಿಸಿಡಬೇಕು.
ಬಯಕೆ ಈಡೇರಬೇಕೆಂದ್ರೆ ದೇವರ ಮನೆಯಲ್ಲಿ ಸ್ವಸ್ತಿಕವನ್ನು ಬಿಡಿಸಿ ಅದ್ರ ಮೇಲೆ ಇಷ್ಟದ ದೇವರ ಫೋಟೋ ಇಟ್ಟು ಪೂಜೆ ಮಾಡಬೇಕು.
ಮನೆಯಲ್ಲಿ ಸದಾ ಶಾಂತಿ ನೆಲೆಸಿರಬೇಕು ಎನ್ನುವವರು ಈಶಾನ್ಯ ಕೋಣೆಯ ಗೋಡೆಗೆ ಅರಿಶಿನದ ಸ್ವಸ್ತಿಕ ಬಿಡಿಸಬೇಕು.