ಗಣೇಶ ಪುರಾಣದ ಪ್ರಕಾರ, ವಿಘ್ನ ವಿನಾಶಕನಿಗೆ ಆದಿಯಲ್ಲಿ ಮೊದಲ ಪೂಜೆ ನಡೆಯುತ್ತದೆ. ಯಾವುದೇ ಶುಭ ಕೆಲಸದ ಆರಂಭದಲ್ಲಿ ಮೊದಲು ಗಣೇಶನ ಆರಾಧನೆ ಮಾಡಲಾಗುತ್ತದೆ.
ಸಫಲತೆ ಪ್ರಾಪ್ತಿಗಾಗಿ ಪ್ರತಿ ಬುಧವಾರ ಗಣೇಶನ ಆರಾಧನೆ ಮಾಡಬೇಕು. ಗಣೇಶನ ಪೂಜೆಯಿಂದ ಮನೆಯಲ್ಲಿ ಶುಭ ವಾತಾವರಣ ನೆಲೆಸಿರುತ್ತದೆ. ಧನ ಸಂಬಂಧ ಕೆಲಸದಲ್ಲಿ ಫಲ ಸಿಗುತ್ತದೆ.
ಬುಧವಾರ ಬುಧ ಗ್ರಹದ ಪೂಜೆ ಕೂಡ ಮಾಡಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹ ಅಶುಭ ಸ್ಥಿತಿಯಲ್ಲಿದ್ದರೆ ಬುಧವಾರ ಅವಶ್ಯವಾಗಿ ಈ ಕೆಲಸಗಳನ್ನು ಮಾಡಬೇಕು.
ಗಣೇಶನಿಗೆ ಸಿಂಧೂರ, ಚಂದನ, ಜೇನು, ದರ್ಬೆಯನ್ನು ಅರ್ಪಿಸಬೇಕು. ಬೆಲ್ಲದಲ್ಲಿ ಮಾಡಿದ ಸಿಹಿ ನೈವೇದ್ಯ ಮಾಡಬೇಕು. ಧೂಪ ಹಾಗೂ ದೀಪದ ಆರತಿ ಮಾಡಬೇಕು. ಪೂಜೆ ವೇಳೆ ‘ವಕ್ರತುಂಡ ಮಹಾಕಾಯ’ ಮಂತ್ರವನ್ನು ಪಠಿಸಬೇಕು.
ಮಂತ್ರವನ್ನು 108 ಬಾರಿ ಪ್ರತಿ ಬುಧವಾರ ಪಠಣೆ ಮಾಡುವುದ್ರಿಂದ ಜಾತಕದ ಎಲ್ಲ ಗ್ರಹ ದೋಷ ನಿವಾರಣೆಯಾಗುತ್ತದೆ.
ಇದ್ರ ಜೊತೆಗೆ ಬುಧವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಗಣೇಶನ ದೇವಸ್ಥಾನಕ್ಕೆ ಹೋಗಿ ದರ್ಬೆ ಅರ್ಪಿಸಬೇಕು. 11 ಅಥವಾ 21 ದರ್ಬೆಯನ್ನು ಗಣೇಶನ ಚರಣದ ಮೇಲಿಡಿ.
ಅಗತ್ಯವಿರುವ ವ್ಯಕ್ತಿಗೆ ಅಥವಾ ದೇವಸ್ಥಾನಕ್ಕೆ ಹಸಿರು ಬೀನ್ಸ್ ದಾನ ನೀಡಿ.