ಈ ಬಾರಿ ನವೆಂಬರ್ 5 ರಂದು ತುಳಸಿ ಮದುವೆ ಬಂದಿದೆ. ನಾಲ್ಕು ತಿಂಗಳುಗಳ ಕಾಲ ನಿದ್ರೆಯಲ್ಲಿದ್ದ ವಿಷ್ಣು ನಿದ್ರೆಯಿಂದ ಏಳುತ್ತಿದ್ದಂತೆ ತುಳಸಿ ಜೊತೆ ಮದುವೆ ಮಾಡಲಾಗುತ್ತದೆ. ತುಳಸಿ ಮದುವೆಯನ್ನು ಹಿಂದೂ ಧರ್ಮದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ತುಳಸಿ ಮದುವೆಯನ್ನು ಭಯ-ಭಕ್ತಿಯಿಂದ ಮಾಡಿದ್ರೆ ಸುಖ-ಶಾಂತಿ ಜೊತೆಗೆ ಆಯಸ್ಸು, ಆರ್ಥಿಕ ವೃದ್ಧಿಯಾಗುತ್ತದೆ. ತುಳಸಿ ಮದುವೆಯನ್ನು ಸಂಜೆ ಹೊತ್ತಿನಲ್ಲಿ ಮಾಡುವುದು ಶುಭಕರ. ಈ ವೇಳೆ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಅಥವಾ ಛಾವಣಿ ಮೇಲಿಡಬೇಕು.
ಹುಡುಗಿಯರ ಮದುವೆಯಲ್ಲಿ ಚುನರಿಗೆ ಹೇಗೆ ಮಹತ್ವ ನೀಡಲಾಗುತ್ತದೆಯೋ ಅಷ್ಟೇ ಮಹತ್ವವನ್ನು ತುಳಸಿ ಮದುವೆಯಲ್ಲೂ ನೀಡಬೇಕು. ಹಳದಿ ಚುನರಿಯನ್ನು ಬಳಸಿ. ಸೌಭಾಗ್ಯವತಿಗೆ ನೀಡುವ ಎಲ್ಲ ವಸ್ತುವನ್ನು ತುಳಸಿ ಮುಂದಿಡಿ.
ತುಳಸಿ ಮದುವೆ ವೇಳೆ ತುಳಸಿ ಗಿಡದ ಬಳಿ ಸಾಲಿಗ್ರಾಮವನ್ನಿಡಿ. ಆದ್ರೆ ಅದಕ್ಕೆ ಅಕ್ಷತೆಯನ್ನು ಹಾಕಬೇಡಿ.
ಮದುವೆಯಲ್ಲಿ ಮಂಟಪ ಸಿದ್ಧಪಡಿಸುವಂತೆ ತುಳಸಿ-ವಿಷ್ಣುವಿನ ಮದುವೆಗೂ ಮಂಟಪ ಸಿದ್ಧಪಡಿಸಿ. ಮಂಟಪ ಮಾಡುವಾಗ ಬಾಳೆ ಗಿಡ ಹಾಗೂ ಕಬ್ಬನ್ನು ಬಳಸಿ.
ತುಳಸಿ ಹಾಗೂ ಸಾಲಿಗ್ರಾಮ ಪೂಜೆ ಮಾಡುವಾಗ ಹಾಲು ಹಾಗೂ ಅರಿಶಿನವನ್ನು ಬಳಸಿ.