ಪೂಜೆಯಲ್ಲಿ ದೀಪ, ಧೂಪದ ಜೊತೆ ಅಡಿಕೆಗೂ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆ ದೊಡ್ಡ ಖುಷಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮಾಡಿದ್ದ ಅಡಿಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಸುಖ-ಶಾಂತಿ ಜೊತೆಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಬೆಳ್ಳಿ ಪಾತ್ರೆಯಲ್ಲಿ ಅಡಿಕೆಯನ್ನು ಸ್ಥಾಪನೆ ಮಾಡಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಧೂಪ ಹಾಗೂ ದೀಪವನ್ನು ತೋರಬೇಕು. ಇದ್ರಿಂದ ಮನೆಯ ದೌರ್ಭಾಗ್ಯ ದೂರವಾಗುತ್ತದೆ.
ಶಾಸ್ತ್ರಗಳ ಪ್ರಕಾರ ವಿಧಿ-ವಿಧಾನದಿಂದ ಅಡಿಕೆಗೆ ಮಾಡಿದ ಪೂಜೆ ಶೀಘ್ರ ಹಾಗೂ ಆಶ್ಚರ್ಯಕರ ಫಲಿತಾಂಶ ನೀಡುತ್ತದೆ. ಮನೆ ಕಪಾಟಿನಲ್ಲಿ ಶುದ್ಧ ಅಡಿಕೆಯಿಟ್ಟರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಹಣದ ಕೊರತೆ ಎಂದೂ ಕಾಡುವುದಿಲ್ಲ. ಮಂತ್ರಿಸಿದ ಅಡಿಕೆಯನ್ನು ಕಪಾಟಿನಲ್ಲಿಡಬೇಕು. ಕಪಾಟಿನೊಳಗೆ ಸ್ವಸ್ತಿಕವನ್ನು ರಚಿಸಿ ಅದ್ರಲ್ಲಿ ಅಡಿಕೆ ಇಡುವುದು ಶುಭ. ಇದನ್ನು ಕಪಾಟಿನಲ್ಲಿಡುವುದ್ರಿಂದ ಕಪಾಟಿನ ಆಸುಪಾಸು ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ. ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.
ನಿಮ್ಮ ಮನದ ಇಚ್ಛೆ ಈಡೇರಬೇಕಾದಲ್ಲಿ ಯಾವುದಾದ್ರೂ ದೇವಸ್ಥಾನಕ್ಕೆ ಹೋಗಿ ತಾಮ್ರದ ಪಾತ್ರೆಗೆ ಅಡಿಕೆ ಹಾಗೂ ಗಂಗಾಜಲವನ್ನು ಹಾಕಿ ದಕ್ಷಿಣೆ ನೀಡಿ. ಮನೋಕಾಮನೆ ಈಡೇರುವ ಜೊತೆಗೆ ಈಶ್ವರನ ಕೃಪೆ ಪ್ರಾಪ್ತವಾಗುತ್ತದೆ.