ಪ್ರತಿಯೊಂದು ಮನೆಯಲ್ಲೂ ಸುಖ-ಶಾಂತಿಗೆ ವಾಸ್ತು ಬಹಳ ಮುಖ್ಯ. ಮನೆಯ ವಾಸ್ತು ಚೆನ್ನಾಗಿದ್ದಲ್ಲಿ ಸುಖ-ಶಾಂತಿ, ಆಯಸ್ಸು, ಆರ್ಥಿಕ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ವಾಸ್ತು ದೋಷದಿಂದ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ನಕಾರಾತ್ಮಕ ಶಕ್ತಿ ದೂರ ಮಾಡಲು ಶಾಸ್ತ್ರದಲ್ಲಿ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ.
ಉಪ್ಪು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ಶಕ್ತಿ ಹೊಂದಿದೆ. ಪ್ರತಿ ದಿನ ನೀರಿಗೆ ಉಪ್ಪು ಬೆರೆಸಿ ಮನೆಗೆ ಸಿಂಪಡಿಸಬೇಕು. ಹಾಗೆ ಬಾತ್ ರೂಮಿನ ಮೂಲೆಯಲ್ಲಿ ಗ್ಲಾಸ್ ಬಾಟಲಿಯಲ್ಲಿ ಉಪ್ಪನ್ನು ಹಾಕಿ ಇಡಬಹುದು.
ಪ್ರತಿ ದಿನ ಬೆಳಿಗ್ಗೆ ಪೂಜೆ ಮಾಡುವ ವೇಳೆ ಕರ್ಪೂರವನ್ನು ಹಚ್ಚಿ ಅದ್ರ ಹೊಗೆಯನ್ನು ಇಡೀ ಮನೆಗೆ ಹಾಕಬೇಕು. ಇದ್ರಿಂದ ಮನೆಯಲ್ಲಿರುವ ವಿಷಜಂತುಗಳ ನಾಶವಾಗುತ್ತದೆ. ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ.
ಪೂಜೆ ವೇಳೆ ಮನೆಯಲ್ಲಿ ಚಪ್ಪಾಳೆ ಹೊಡೆಯುವುದು ಕೂಡ ಹಳೆ ಪದ್ಧತಿ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಪೂಜೆ ಮಾಡುವ ವೇಳೆ ಚಪ್ಪಾಳೆ ತಟ್ಟಿ ಶಬ್ಧ ಮನೆಯೊಳಗೆ ಕೇಳುವಂತೆ ಮಾಡಬೇಕು. ಇದ್ರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ತುಳಸಿಯನ್ನು ಹಿಂದೂ ಧರ್ಮದಲ್ಲಿ ದೇವರೆಂದು ಪೂಜಿಸಲಾಗುತ್ತದೆ. ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವಿರುವುದು ಒಳ್ಳೆಯದು. ಇದು ಮನೆಯ ವಾತಾವರಣವನ್ನು ಶುದ್ಧ ಮಾಡುತ್ತದೆ.