ಎರಡು ದಿನಕ್ಕೊಮ್ಮೆ ಸಂಗಾತಿ ಜೊತೆ ಗಲಾಟೆ-ಜಗಳವಾಗ್ತಿದೆ ಎಂದಾದಲ್ಲಿ ಇದನ್ನು ನಿರ್ಲಕ್ಷ್ಯಿಸಬೇಡಿ. ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಇದ್ರ ಜೊತೆಗೆ ವಾಸ್ತು ಬಗ್ಗೆ ಗಮನ ನೀಡಿ. ಮುಖ್ಯವಾಗಿ ಬೆಡ್ ರೂಂ ವಾಸ್ತು ಬಗ್ಗೆ ಗಮನವಿರಲಿ.
ವಾಸ್ತು ದೋಷದಿಂದಾಗಿ ಬೆಡ್ ರೂಂನಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಇದ್ರಿಂದ ಸಂಗಾತಿ ನಡುವೆ ಆಗಾಗ ಜಗಳವಾಗುತ್ತದೆ. ಹಾಗಾಗಿ ಬೆಡ್ ರೂಂ ಸದಾ ಶಾಂತವಾಗಿರಬೇಕು. ಅದು ನೆಮ್ಮದಿ ನೀಡುವ ಸ್ಥಳವಾಗಿರಬೇಕು. ಸುಖ-ಶಾಂತಿಗಾಗಿ ಬೆಡ್ ರೂಂ ವಾಸ್ತು ಬಗ್ಗೆ ಗಮನ ನೀಡುವುದು ಬಹಳ ಮುಖ್ಯ.
ಸಾಮಾನ್ಯವಾಗಿ ಗಲಾಟೆ-ಜಗಳವಾಗುವ ಸ್ಥಳ ಬೆಡ್ ರೂಂ. ಜಗಳ ಹೆಚ್ಚಾದಂತೆ ಬೆಡ್ ರೂಂನಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ. ಹಾಗಾಗಿ ಗಲಾಟೆಯಾಗುತ್ತೆ ಎನ್ನುವ ವಿಷಯದ ಚರ್ಚೆ ನಡೆಸುತ್ತಿರುವಾಗ ಮಲಗುವ ಕೋಣೆಯಿಂದ ಹೊರಗೆ ಬನ್ನಿ. ಮನೆಯ ಬೇರೆ ಸ್ಥಳಕ್ಕೆ ಬಂದು ಆ ವಿಷಯದ ಬಗ್ಗೆ ಚರ್ಚೆ ನಡೆಸಿ.
ಮಲಗುವ ಕೋಣೆಯ ಗೋಡೆ ಬಗ್ಗೆಯೂ ಗಮನ ನೀಡಬೇಕಾದ ಅಗತ್ಯವಿದೆ. ಗೋಡೆ ಬಿರುಕು ಬಿಡದಂತೆ ನೋಡಿಕೊಳ್ಳಿ. ಬೆಡ್ ರೂಂ ಗೋಡೆ ಬಿರುಕು ಬಿಟ್ಟಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ.
ಮಲಗುವ ಕೋಣೆ ಪಶ್ಚಿಮ-ದಕ್ಷಿಣ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ಹಾಸಿಗೆ ಕೂಡ ಬೆಡ್ ರೂಂನಲ್ಲಿಯೇ ಇರಲಿ. ಹಾಸಿಗೆ ಬೇರೆ ರೂಮಿನಲ್ಲಿದ್ದರೆ ಸರಿಯಾಗಿ ನಿದ್ರೆ ಬರುವುದಿಲ್ಲ.
ಬೆಡ್ ರೂಂನಲ್ಲಿ ಹಿಂಸಾತ್ಮಕ ಫೋಟೋಗಳನ್ನು ಹಾಕಬೇಡಿ. ಇದು ಜಗಳವನ್ನು ಹೆಚ್ಚು ಮಾಡುತ್ತದೆ.