ಕೆಲವೊಂದು ರಾಶಿಯವರ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಮತ್ತೆ ಕೆಲವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇದಕ್ಕೆ ರಾಶಿಯಲ್ಲಾಗುವ ಬದಲಾವಣೆ ಕಾರಣ. ಹಾಗೆ ಕೆಲವೊಂದು ವಾಸ್ತು ದೋಷಗಳು ದಾಂಪತ್ಯ ಸುಖವನ್ನು ಹಾಳು ಮಾಡುತ್ತವೆ. ಹಾಗಾಗಿ ದಾಂಪತ್ಯ ಸುಖ ಬಯಸುವವರು ಕೆಲವೊಂದು ಉಪಾಯಗಳನ್ನು ಅನುಸರಿಸಬೇಕು.
ನವ ದಂಪತಿ ಕೋಣೆ ಬಗ್ಗೆ ಗಮನ ನೀಡಬೇಕು. ದಕ್ಷಿಣ-ಪೂರ್ವ ದಿಕ್ಕಿಗೆ ದಂಪತಿ ಮಲಗಬೇಕು. ಈ ದಿಕ್ಕಿನಲ್ಲಿ ಶುಕ್ರ ವಾಸವಾಗಿರುತ್ತಾನೆ. ಇದು ಬಾಳಿನಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.
ಮಲಗುವ ಕೋಣೆಯ ಬ್ರಹ್ಮ ಸ್ಥಾನವನ್ನು ಖಾಲಿ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಡ್ರೆಸ್ಸಿಂಗ್ ಟೇಬಲ್ ಕೂಡ ದಾಂಪತ್ಯದ ಮೇಲೆ ಪ್ರಭಾವ ಬೀರುತ್ತದೆ. ಮಲಗುವ ಕೋಣೆಯಲ್ಲಿ ಎಲೆಕ್ಟ್ರಿಕ್ ವಸ್ತುಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಟಿವಿ ಇಡಬಾರದು. ಬೆಡ್ ರೂಮಿನಲ್ಲಿ ಎಂದೂ ಗಿಡಗಳನ್ನು ಬೆಳೆಸಬಾರದು. ಮುಳ್ಳಿನ ಗಿಡಗಳ ಚಿತ್ರವೂ ಇರಬಾರದು. ಒಂದೇ ಹಾಸಿಗೆ ಮೇಲೆ ಮಲಗಬೇಕು. ಬೇರೆ ಬೇರೆ ಹಾಸಿಗೆ, ದಿಂಬು, ಚಾದರ ಬಳಸುತ್ತಿದ್ದರೆ ದಾಂಪತ್ಯದಲ್ಲಿ ಬಿರುಕು ಕಾಣಿಸುತ್ತದೆ.
ಮಲಗುವ ಕೋಣೆಯಲ್ಲಿ ದೇವರ ಮನೆ ಅಥವಾ ತ್ರಿಜೋರಿ ಇರಬಾರದು. ಪೂಜೆಸಲ್ಪಡುವ ಯಾವುದೇ ವಸ್ತುವನ್ನು ಇಡಬಾರದು. ಹಾಗೆ ಯುದ್ಧ, ಗಲಾಟೆ, ಸಮುದ್ರದ ಅಲೆಯಿರುವ ಫೋಟೋ ಹಾಕಬಾರದು.