ಕುಟುಂಬದಲ್ಲಿ ಸುಖ-ಸಂತೋಷ ಬಹಳ ಮುಖ್ಯ. ಮನೆಯಲ್ಲಿ ಸದಾ ನಗು ತುಂಬಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ವಾಸ್ತು ದೋಷದಿಂದಾಗಿ ನಮಗೆ ತಿಳಿಯದೇ ಮುನಿಸು, ಕೋಪ ಶುರುವಾಗುತ್ತದೆ. ಕೆಲವೊಂದು ಫೆಂಗ್ ಶುಯಿ ನಿಯಮಗಳನ್ನು ಪಾಲಿಸಿದಲ್ಲಿ ಮನೆಯಲ್ಲಿ ನೆಮ್ಮದಿ ಕಾಣಬಹುದಾಗಿದೆ.
ಅಡುಗೆ ಮನೆಯಲ್ಲಿ ಒಲೆ ಹಾಗೂ ನಲ್ಲಿ ಒಂದೇ ಕಡೆ ಇರಬಾರದು. ಹೀಗೆ ಇದ್ದಲ್ಲಿ ಅತ್ತೆ-ಸೊಸೆ ನಡುವೆ ಭಿನ್ನಾಭಿಪ್ರಾಯ ಮೂಡುತ್ತದೆ. ಹಾಗಾಗಿ ನಲ್ಲಿ ಹಾಗೂ ಒಲೆ ಒಟ್ಟಿಗೆ ಇರದಂತೆ ನೋಡಿಕೊಳ್ಳಿ.
ಅಡುಗೆ ಮನೆಯಲ್ಲಿ ಎಂದೂ ಕನ್ನಡಿಯನ್ನು ಹಾಕಬೇಡಿ. ಇದು ಕುಟುಂಬಕ್ಕೆ ಹಾನಿಕರ. ಹಾಗೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ರೂಢಿ ಮಾಡಿಕೊಳ್ಳಿ.
ಲಿವಿಂಗ್ ರೂಮಿನ ನೈಋತ್ಯ ಭಾಗದಲ್ಲಿ ಸ್ಫಟಿಕವನ್ನಿಡುವುದರಿಂದ ಕುಟುಂಬದಲ್ಲಿ ಸ್ನೇಹದ ವೃದ್ಧಿಯಾಗುತ್ತದೆ. ಸ್ಫಟಿಕದ ಒಂದು ಚಿಪ್ಪನ್ನು ಮಾತ್ರ ಇಡಿ.
ಕುಟುಂಬದ ಸಂತೋಷಕ್ಕಾಗಿ ಕೋಣೆಯ ನೈಋತ್ಯ ಭಾಗದಲ್ಲಿ ಕ್ರೀಂ ಕಲರ್ ಚೀನಾ ಮಣ್ಣಿನ ಹೂದಾನಿಯಲ್ಲಿ ಹಳದಿ ಹೂ ಇಡಿ. ಹೂವು ಬಾಡಿದರೆ ತಕ್ಷಣ ಬದಲಾಯಿಸಿ. ಬಾಡಿದ ಹೂ ಅಶುಭದ ಸಂಕೇತ.
ಮನೆಯ ಲೀವಿಂಗ್ ರೂಂನಲ್ಲಿ ಕುಟುಂಬಸ್ಥರು ಒಂದಾಗಿರುವ ಫೋಟೋವನ್ನು ಹಾಕಿ. ಈ ಫೋಟೋದಲ್ಲಿ ಎಲ್ಲರೂ ನಗುತ್ತಿರಲಿ. ನಗುವಿಲ್ಲದ ಹಾಗೂ ಕುಟುಂಬದ ಎಲ್ಲ ಸದಸ್ಯರೂ ಇಲ್ಲದ ಫೋಟೋವನ್ನು ಮನೆಯಲ್ಲಿ ಹಾಕಬೇಡಿ.