ಆಧುನಿಕತೆಯಿಂದಾಗಿ ಜೀವನಶೈಲಿಯೂ ಬದಲಾಗಿದ್ದು, ಕುಟುಂಬ ವ್ಯವಸ್ಥೆಯಲ್ಲಿಯೂ ಬದಲಾವಣೆ ಕಂಡಿದೆ.
ಪತಿ, ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಒತ್ತಡ ಜಾಸ್ತಿಯಾಗುತ್ತದೆ. ಜೊತೆಗೆ ಮನೆ ಕೆಲಸ ಮಾಡುವುದರಿಂದ ದಂಪತಿಗಳ ನಡುವೆ ಆತ್ಮೀಯತೆ ಕಡಿಮೆಯಾಗುತ್ತದೆ.
ಮನೆ ಕೆಲಸಗಳನ್ನು ಹಂಚಿಕೊಂಡು ಮಾಡುವ ದಂಪತಿ ಹೆಚ್ಚು ಬಾರಿ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂದು ಜರ್ನಲ್ ಆಫ್ ಮ್ಯಾರೇಜ್ ಅಂಡ್ ಫ್ಯಾಮಿಲಿಯ ಸಂಚಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟವಾಗಿದೆ.
ಮನೆ ಕೆಲಸವನ್ನು ಹಂಚಿಕೊಂಡು ಮಾಡುವ ದಂಪತಿ ನಡುವೆ ಅನ್ಯೋನ್ಯತೆ ಇರುತ್ತದೆ. ಹಾಗಾಗಿ ಅವರು ತಿಂಗಳಿಗೆ 6-8 ಸಲ ಸೇರಿದರೆ, ಒಬ್ಬರೇ ಮನೆ ಕೆಲಸ ನಿರ್ವಹಿಸುವ ದಂಪತಿಗಳಲ್ಲಿ ಈ ಪ್ರಮಾಣ ಕಡಿಮೆಯಾಗಿರುತ್ತದೆ ಎಂದು ದಾಂಪತ್ಯದ ತೃಪ್ತಿ ಕುರಿತು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.
ಗಂಡ, ಹೆಂಡತಿ ಮನೆಯ ಕೆಲಸವನ್ನು ಹಂಚಿಕೊಂಡು ಮಾಡುವುದರಿಂದ ಅವರ ನಡುವೆ ಬಾಂಧವ್ಯ, ಗೌರವ, ಪ್ರೀತಿ ಹೆಚ್ಚಾಗುತ್ತದೆ. ಇದರಿಂದ ದೈಹಿಕ ಸಂಬಂಧ ವೃದ್ಧಿಯಾಗುತ್ತದೆ. ಒಬ್ಬರೇ ಹೆಚ್ಚಿನ ಕೆಲಸ ಮಾಡುವುದರಿಂದ ಆಸಕ್ತಿ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.