alex Certify ‘ಸುಕನ್ಯಾ ಸಮೃದ್ಧಿ ಯೋಜನೆ’ಯ ನಿಯಮಗಳಲ್ಲಿ ಬದಲಾವಣೆ: ಖಾತೆ ತೆರೆಯುವ ಮುನ್ನ ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸುಕನ್ಯಾ ಸಮೃದ್ಧಿ ಯೋಜನೆ’ಯ ನಿಯಮಗಳಲ್ಲಿ ಬದಲಾವಣೆ: ಖಾತೆ ತೆರೆಯುವ ಮುನ್ನ ನಿಮಗಿದು ತಿಳಿದಿರಲಿ

ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಹೆಣ್ಣುಮಕ್ಕಳ ಭವಿಷ್ಯ ಆರ್ಥಿಕವಾಗಿ ಸದೃಢವಾಗಿರಬೇಕು ಎಂಬ ಕಾರಣಕ್ಕೆ ಜಾರಿ ಮಾಡಲಾದ ಯೋಜನೆ ಇದು. ಹೆಣ್ಣು ಮಕ್ಕಳ ಪೋಷಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಮಗಳು ಕೇವಲ 21 ವರ್ಷಗಳಲ್ಲಿ ಮಿಲಿಯನೇರ್ ಆಗುತ್ತಾಳೆ.

ದಿನಕ್ಕೆ 416 ರೂಪಾಯಿ ಹೂಡಿಕೆ ಮಾಡಿದ್ರೆ, ನಂತರ ನಿಮ್ಮ ಮಗಳಿಗೆ 65 ಲಕ್ಷ ರೂಪಾಯಿಗಳ ಭಾರಿ ಮೊತ್ತ ಸಿಗುತ್ತದೆ. ಈ ಹಣದಲ್ಲಿ ಮಗಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಬಹುದು. ಈ ಯೋಜನೆಯ ನಿಮಯಗಳಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಅವನ್ನೆಲ್ಲ ವಿವರವಾಗಿ ನೋಡೋಣ.

ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?

ಸುಕನ್ಯಾ ಸಮೃದ್ಧಿ ಯೋಜನೆ ದೀರ್ಘಾವಧಿಯ ಸ್ಕೀಮ್‌. ಇದರಲ್ಲಿ ಹೂಡಿಕೆ ಮಾಡಲು ಹೆಣ್ಣು ಹೆತ್ತವರಿಗೆ ಮಾತ್ರ ಅವಕಾಶವಿದೆ. ಈ ಯೋಜನೆಯಲ್ಲಿ ಹಲವು ಪ್ರಮುಖ ಬದಲಾವಣೆಗಳಾಗಿವೆ. ಹೊಸ ನಿಯಮಗಳ ಅಡಿಯಲ್ಲಿ ಖಾತೆಯಲ್ಲಿನ ತಪ್ಪಾದ ಬಡ್ಡಿಯನ್ನು ರಿವರ್ಸ್ ಮಾಡುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಹೆಚ್ಚುವರಿಯಾಗಿ ಖಾತೆಯ ಮೇಲಿನ ವಾರ್ಷಿಕ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಜಮಾ ಮಾಡಲಾಗುತ್ತದೆ.ಮಗಳು 10 ವರ್ಷಗಳ ನಂತರವೇ ಖಾತೆ ನಿರ್ವಹಿಸಬಹುದೆಂಬ ನಿಯಮ ಮೊದಲು ಇತ್ತು. ಆದರೆ ಹೊಸ ನಿಯಮಗಳ ಪ್ರಕಾರ ಮಗಳು 18 ವರ್ಷಕ್ಕಿಂತ ಮೊದಲು ಖಾತೆಯನ್ನು ನಿರ್ವಹಿಸಲು ಅನುಮತಿಯಿಲ್ಲ.

ಪೋಷಕರು ಮಾತ್ರ ಖಾತೆಯನ್ನು ನಿರ್ವಹಿಸಬಹುದು.  ಈ ಮೊದಲು ಸುಕನ್ಯಾ ಸಮೃದ್ಧಿ ಯೋಜನೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಇಬ್ಬರು ಹೆಣ್ಣುಮಕ್ಕಳ ಖಾತೆಗೆ ಮಾತ್ರ ಲಭ್ಯವಿತ್ತು. ಮೂರನೇ ಮಗುವೂ ಹೆಣ್ಣಾಗಿದ್ದರೆ ಈ ಸೌಲಭ್ಯ ಆಕೆಗೆ ಸಿಗುತ್ತಿರಲಿಲ್ಲ. ಆದ್ರೆ ಹೊಸ ನಿಯಮದ ಪ್ರಕಾರ ಒಂದು ಹೆಣ್ಣು ಮಗುವಿನ ನಂತರ ಇಬ್ಬರು ಅವಳಿ ಹೆಣ್ಣು ಮಕ್ಕಳು ಜನಿಸಿದರೆ, ಅವರಿಬ್ಬರಿಗೂ ಖಾತೆ ತೆರೆಯಲು ಅವಕಾಶವಿದೆ.

ಡೀಫಾಲ್ಟ್ ಖಾತೆಯಲ್ಲಿ ಬಡ್ಡಿ ದರ ಬದಲಾಗುವುದಿಲ್ಲ

ವಾರ್ಷಿಕವಾಗಿ ಖಾತೆಯಲ್ಲಿ ಕನಿಷ್ಠ 250 ರೂಪಾಯಿಯನ್ನು  ಠೇವಣಿ ಮಾಡದಿದ್ದರೆ ಖಾತೆಯನ್ನು ಡೀಫಾಲ್ಟ್ ಎಂದು ಪರಿಗಣಿಸಲಾಗುತ್ತದೆ. ಆದರೆ ಹೊಸ ನಿಯಮಗಳ ಪ್ರಕಾರ, ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ, ಮುಕ್ತಾಯದವರೆಗೆ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಅನ್ವಯವಾಗುವ ದರದಲ್ಲಿ ಬಡ್ಡಿಯು ಮುಂದುವರಿಯುತ್ತದೆ. ಹಿಂದಿನ ಡಿಫಾಲ್ಟ್ ಖಾತೆಗಳು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಗಳಿಸುತ್ತಿದ್ದವು.

ಖಾತೆಯನ್ನು ಅವಧಿಗೂ ಮುಂಚಿತವಾಗಿ ಮುಚ್ಚಬಹುದು

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ತೆರೆಯಲಾದ ಖಾತೆಯನ್ನು ಮೊದಲ ಎರಡು ಸಂದರ್ಭಗಳಲ್ಲಿ ಮುಚ್ಚಬಹುದು. ಮಗಳು ಸಾವನ್ನಪ್ಪಿದರೆ ಅಥವಾ ನಿವಾಸದ ವಿಳಾಸ ಬದಲಾದರೆ ಖಾತೆ ಮುಚ್ಚಲು ಅವಕಾಶವಿದೆ. ಆದರೆ ಖಾತೆದಾರ ಮಗು ಮಾರಕ ರೋಗಕ್ಕೆ ತುತ್ತಾದಲ್ಲಿ ಖಾತೆ ಮುಚ್ಚಲು ಅವಕಾಶ ನೀಡಲಾಗಿದೆ. ಪೋಲಕರ ಮರಣದ ನಂತರವೂ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...