alex Certify ಸುಂಟರಗಾಳಿಗೆ ಸಿಲುಕಿ ಗಿರಗಿರನೇ ತಿರುಗಿದ ಪಿಕ್-ಅಪ್ ವಾಹನ: ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂಟರಗಾಳಿಗೆ ಸಿಲುಕಿ ಗಿರಗಿರನೇ ತಿರುಗಿದ ಪಿಕ್-ಅಪ್ ವಾಹನ: ಭಯಾನಕ ವಿಡಿಯೋ ವೈರಲ್

ಇತ್ತೀಚೆಗೆ, ಅಮೆರಿಕಾದ ಟೆಕ್ಸಾಸ್‌ನ ಎಲ್ಜಿನ್‌ನಲ್ಲಿ ಚಾಲಕನೊಬ್ಬ ಸುಂಟರಗಾಳಿಗೆ ಸಿಲುಕಿ ಪವಾಜಸದೃಶನಾಗಿ ಬದುಕುಳಿದಿರೋ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋ ವೈರಲ್ ಆಗಿದೆ.

ಸ್ಟಾರ್ಮ್ ಚೇಸರ್ ಬ್ರಿಯಾನ್ ಎಂಫಿಂಗರ್ ಅವರು ಈ ಭಯಾನಕ ದೃಶ್ಯವನ್ನು ಸೆರೆಹಿಡಿದಿದ್ದು, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಿಕ್-ಅಪ್ ಟ್ರಕ್ ಒಂದು ಭಯಾನಕ ಸುಂಟರಗಾಳಿಯಲ್ಲಿ ಸಿಲುಕಿ ಗಿರಗಿರನೇ ತಿರುಗಿರೋ ವಿಡಿಯೋ ವೈರಲ್ ಆಗಿದೆ.

ಹಿಂಸಾತ್ಮಕ ಸುಂಟರಗಾಳಿಗೆ ಸಿಲುಕಿದ ಟ್ರಕ್ ವೊಂದು ಅದನ್ನು 360 ಡಿಗ್ರಿಗಳ ಸುತ್ತಲೂ ತಿರುಗಿಸಿದೆ. ನೋಡಲು ಭಯಾನಕ ಎಂದೆನಿಸಿದ್ರೂ, ಪವಾಡಸದೃಶವಾಗಿ ನೆಟ್ಟಗೆ ಹಿಂತಿರುಗಿದ ವಾಹನವು ಹೆದ್ದಾರಿಯಲ್ಲಿ ಚಲಿಸಿದೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, 6 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಸುಂಟರಗಾಳಿಗೆ ಸಿಲುಕಿ ಒದ್ದಾಡಿ, ಬದುಕುಳಿದ ಕಾರು ಚಾಲಕನ 16 ವರ್ಷದ ಬಾಲಕ ರೆನಾಲ್ಡ್ಸ್ ಎಂಬುದಾಗಿ ಗುರುತಿಸಲಾಗಿದೆ. ಆತ ಯಾವುದೇ ರೀತಿಯಾಗಿ ಗಾಯಗೊಳ್ಳದೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

— Brian Emfinger (@brianemfinger) March 22, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...