ಸೀತಾಫಲ ಹಣ್ಣು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಲಭಿಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ಬೀಜದಿಂದ ಹುಟ್ಟುವ ಈ ಗಿಡವನ್ನು ನಮ್ಮ ಮನೆಯಂಗಳದಲ್ಲೂ ಬೆಳೆಯಬಹುದು. ಈ ಹಣ್ಣಿನಲ್ಲಿ ವಿಟಮಿನ್ ಎ, ಮೆಗ್ನೀಷಿಯಂ, ಪೊಟಾಷಿಯಂ, ಫೈಬರ್, ವಿಟಮಿನ್ ಬಿ 6, ಕ್ಯಾಲ್ಶಿಯಂ, ವಿಟಮಿನ್ ಸಿ, ಐರನ್ ಮೊದಲಾದ ಪೋಷಕಾಂಶಗಳಿವೆ.
ಇದರ ಸೇವನೆಯಿಂದ ದೇಹದ ಉಷ್ಣತೆ ಉಪಶಮನ ಆಗುತ್ತದೆ. ಬೇಧಿ ಅದರೆ ಇದರ ಎಲೆಯಿಂದ ಹಾಗೂ ತೊಗಟೆಯಿಂದ ತಯಾರಿಸಿದ ಕಷಾಯ ಕುಡಿದರೆ ನಿವಾರಣೆಯಾಗುತ್ತದೆ. ಇದರ ಕಷಾಯದಿಂದ ನೆಗಡಿಯೂ ಕಡಿಮೆಯಾಗುತ್ತದೆ.
ಇದರಿಂದ ಸ್ನಾಯು, ನರಗಳ ಬಲಹೀನತೆ ಕಡಿಮೆ ಆಗುತ್ತದೆ. ದೇಹಕ್ಕೆ ಬೇಕಾದ ಶಕ್ತಿ ಲಭಿಸುತ್ತದೆ. ಕಣ್ಣಿನ ಸಮಸ್ಯೆ ದೂರ ಆಗುತ್ತದೆ. ಕೊಬ್ಬನ್ನು ಕರಗಿಸುತ್ತದೆ. ಜಂತು ಹುಳುಗಳು ಸಾಯುತ್ತದೆ. ಗ್ಯಾಸ್, ಅಸಿಡಿಟಿ, ಅಜೀರ್ಣ, ಮಲಬದ್ದತೆ, ಜೀರ್ಣ ಸಂಬಂಧಿಸಿದ ಸಮಸ್ಯೆಗಳು ಗುಣವಾಗುತ್ತವೆ. ಮಕ್ಕಳು ಬಾಣಂತಿಯರಿಗೆ ಸೀತಾಫಲ ಒಳ್ಳೆಯ ಪೋಷಕಾಂಶ ನೀಡುತ್ತದೆ.