ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ ಆಗಲಿಲ್ಲ. ಅದಕ್ಕೆ ಸರಿ ಹೊಂದುವ ಬ್ಲೌಸ್, ಲಂಗ, ಆಭರಣ, ಚಪ್ಪಲಿ ಎಲ್ಲವೂ ಮಹತ್ವ ಪಡೆಯುತ್ತದೆ.
ಮದುವೆ ಸಮಾರಂಭಗಳಲ್ಲಿ ದುಬಾರಿ ಬೆಲೆಯ ಸೀರೆ ಉಡುವ ಮಹಿಳೆಯರು ಮನೆಯಲ್ಲಿದ್ದ ಎಲ್ಲ ಆಭರಣಗಳನ್ನೂ ಹಾಕಿಕೊಳ್ತಾರೆ. ಇದು ಅವರ ಲುಕ್ ಹಾಳು ಮಾಡುತ್ತೆ. ಬಂಗಾರದಂಗಡಿ ಮನೆಗೆ ಬಂದಂತೆ ಕಾಣುತ್ತದೆಯೇ ವಿನಃ ಮಹಿಳೆ ಸುಂದರವಾಗಿ ಕಾಣೋದಿಲ್ಲ.
ಬೇರೆ ಬೇರೆ ಸ್ಟೈಲ್ ನಲ್ಲಿ ಸೀರೆಯನ್ನು ಉಡಬಹುದು. ಆದ್ರೆ ಅದ್ರಲ್ಲಿ ಯಾವ ಸ್ಟೈಲ್ ನಿಮ್ಮನ್ನು ಆಕರ್ಷಕವಾಗಿ ಮಾಡುತ್ತದೆಯೋ ಅದೇ ಸ್ಟೈಲ್ ನಲ್ಲಿ ಸೀರೆ ಉಟ್ಟುಕೊಳ್ಳಿ. ಸೊಂಟಕ್ಕಿಂತ ತುಂಬಾ ಮೇಲೆ ಅಥವಾ ತುಂಬಾ ಕೆಳಗೆ ಇರೋದು ಬೇಡ. ತೆಳ್ಳಗೆ- ಬೆಳ್ಳಗೆ ಇರೋರು ಹೊಕ್ಕಳ ಕೆಳಗೆ ಸೀರೆ ಉಟ್ಟರೆ ಒಳ್ಳೆಯದು. ಹಾಗಂತ ದಪ್ಪಗಿರುವವರು ಹೀಗೆ ಮಾಡಿದ್ರೆ ಹೊಟ್ಟೆ ಮತ್ತಷ್ಟು ದೊಡ್ಡದಾಗಿ ಕಾಣುತ್ತದೆ.
ಕೆಲ ಮಹಿಳೆಯರು ಸೀರೆ ಜೊತೆ ಹಳೆಯ ಅಥವಾ ದೊಡ್ಡ ಹ್ಯಾಂಡ್ ಬ್ಯಾಗ್ ಹಿಡಿದು ಬರ್ತಾರೆ. ಆದರೆ ಇದರಿಂದ ಲುಕ್ ಸರಿ ಹೊಂದುವುದಿಲ್ಲ. ಪಾರ್ಟಿ ಅಥವಾ ಸಮಾರಂಭಗಳಿಗೆ ಹೋಗುವಾಗ ಸೀರೆ ಜೊತೆ ಚಿಕ್ಕದಾದ ಬ್ಯಾಗ್ ಅಥವಾ ಸಣ್ಣ ಪರ್ಸ್ ತೆಗೆದುಕೊಂಡು ಹೋಗಿ.
ಸೀರೆ ಪಾದಕ್ಕಿಂತ ಕೆಳಗೆ ಬರೋದ್ರಿಂದ ಚಪ್ಪಲಿ ಕಾಣೋದಿಲ್ಲ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಹಳೆಯ ಚಪ್ಪಲಿ ಧರಿಸುವುದುಂಟು. ಸೀರೆ ಉಟ್ಟ ಮೇಲೆ ಸರಾಗವಾಗಿ, ಆರಾಮಾಗಿ ಓಡಾಡಲು ಬರಬೇಕು. ಹಾಗಾಗಿ ನಿಮಗೆ ಯಾವುದೇ ಕಿರಿಕಿರಿ ಎನಿಸದ, ಸೀರೆಗೆ ಸರಿ ಹೊಂದುವ ಚಪ್ಪಲಿ ಧರಿಸಿ.
ಸೀರೆ ಒಳಗೆ ಹಾಕುವ ಒಳ ಲಂಗ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಸೀರೆ ಬಣ್ಣದ ಒಳ ಲಂಗವನ್ನು ಧರಿಸಬೇಕು. ಬೇರೆ ಬಣ್ಣದ ಲಂಗ ಧರಿಸಿದ್ರೆ ಮುಜುಗರಕ್ಕೊಳಗಾಗುವ ಪರಿಸ್ಥಿತಿ ಎದುರಾಗಬಹುದು.
ಬ್ರಾ ಬಗ್ಗೆ ಗಮನವಿರಬೇಕು. ಬ್ಲೌಸ್ ನಿಂದ ಹೊರಗೆ ಬರುವ ಬ್ರಾ ಅಸಹ್ಯವೆನಿಸುತ್ತದೆ. ಬ್ಲೌಸ್ ನಲ್ಲಿರುವ ಸೇಫ್ಟಿ ಹೋಲ್ಡರ್ ಜೊತೆ ಬ್ರಾವನ್ನು ಲಾಕ್ ಮಾಡಿ. ಇಲ್ಲವಾದ್ರೆ ಪಿನ್ ಸಹಾಯದಿಂದಲೂ ಬ್ರಾ ಹೊರಗೆ ಬರದಂತೆ ನೋಡಿಕೊಳ್ಳಿ.