ಲಾಂಗ್ ಬೋರ್ಡ್ ನಲ್ಲಿ ನಿಂತು ರಸ್ತೆಯಲ್ಲಿ ಚಲಿಸುವುದೆಂದರೆ ಒಂದು ರೋಮಾಂಚನವೇ ಸರಿ. ಅದಕ್ಕೆ ಚಾಕಚಕ್ಯತೆಯೂ ಬೇಕು ಮತ್ತು ಬ್ಯಾಲೆನ್ಸ್ ಮಾಡಿ ಚಲಿಸುವ ಕಲೆಯೂ ಕರಗತವಾಗಿರಬೇಕು. ಇಲ್ಲವಾದರೆ, ಕೆಳಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದಂತೂ ನಿಶ್ಚಿತ. ಸಾಮಾನ್ಯವಾಗಿ ಈ ಲಾಂಗ್ ಬೋರ್ಡ್ ಅನ್ನು ಬಳಸುವವರು ಟ್ರ್ಯಾಕ್ ಸೂಟ್ ಹಾಕಿಕೊಳ್ಳುತ್ತಾರೆ.
ಆದರೆ, ಇಲ್ಲೊಬ್ಬ ಮಹಿಳೆ ಸೀರೆಯನುಟ್ಟು ಕೇರಳದ ರಸ್ತೆಯೊಂದರಲ್ಲಿ ಲಾಂಗ್ ಬೋರ್ಡ್ ಬ್ಯಾಲೆನ್ಸ್ ಮಾಡುತ್ತಾ ಚಲಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಲಾರಿಸ್ಸಾ ಡಿಸಾ ಎಂಬ ಈ ಮಹಿಳೆ ಕೇರಳದ ಸಾಂಪ್ರದಾಯಿಕ ಕಸವು ಸೀರೆಯನ್ನು ಧರಿಸಿ ರಸ್ತೆಯಲ್ಲಿ ಲಾಂಗ್ ಬೋರ್ಡ್ ಮೇಲೆ ಚಲಿಸುತ್ತಾ ಎದುರಾದವರಿಗೆ ನಮಸ್ತೆ ಹೇಳುವ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಪಕ್ಕದಲ್ಲಿ ಚಲಿಸುವ ವಾಹನ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ವಿಶ್ ಮಾಡುತ್ತಿದ್ದಾರೆ ಈ ವಿಡಿಯೋದಲ್ಲಿ. ನಾನು ಇದನ್ನು ಮಾಡಬೇಕಿತ್ತು. ಸೀರೆಯನ್ನು ಧರಿಸಿ ಲಾಂಗ್ ಬೋರ್ಡ್ ಸಾಹಸ ಮಾಡುವುದು ಸುಲಭದ ಕೆಲಸವಲ್ಲ. ನಾನು ಧೈರ್ಯ ಮತ್ತು ಛಲದಿಂದ ಮಾಡಿದ್ದೇನೆ. ಸಾಕಷ್ಟು ಜನರು ಈ ಸಾಹಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ನನ್ನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಲಾರಿಸ್ಸಾ ಹೇಳಿಕೊಂಡಿದ್ದಾರೆ.
ಅವರ ಈ ಪೋಸ್ಟ್ ಗೆ ಒಂದು ಲಕ್ಷಕ್ಕೂ ಅಧಿಕ ಲೈಕ್ ಗಳು ಬಂದಿದ್ದರೆ, ಹಲವಾರು ನೆಟ್ಟಿಗರು ಈಕೆಯ ಸಾಹಸವನ್ನು ಹೊಗಳಿದ್ದಾರೆ.
https://youtu.be/iR65xsRGhxU