
ಸ್ಯಾಂಡಲ್ವುಡ್ ನ ಯುವ ನಟಿ ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಶೂಟ್ ನಲ್ಲೂ ಸಾಕಷ್ಟು ಬಿಜಿಯಾಗಿದ್ದಾರೆ. ಇತ್ತೀಚಿಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೀರೆಯನುಟ್ಟು ಫೋಟೋಗೇ ಫೋಸ್ ನೀಡಿರುವ ನಿಶ್ವಿಕಾ ನಾಯ್ಡು ತಮ್ಮ ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರಿಂದ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದುಬಂದಿದೆ.
ಚಿರಂಜೀವಿ ಸರ್ಜಾ ನಟನೆಯ ಸೂಪರ್ ಡೂಪರ್ ಹಿಟ್ ‘ಅಮ್ಮ ಐ ಲವ್ ಯು’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಿಶ್ವಿಕಾ ನಾಯ್ಡು, ಇತ್ತೀಚೆಗೆ ಬೇಡಿಕೆಯ ನಟಿಯಾಗಿದ್ದಾರೆ. ನಿಶ್ವಿಕಾ ನಾಯ್ಡು ಅಭಿನಯಿಸಿರುವ ‘ಗಾಳಿಪಟ 2’ ಹಾಗೂ ‘ಗುರು ಶಿಷ್ಯರು’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ‘ದಿಲ್ ಪಸಂದ್’ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

