ತಾಯ್ತನದ ಸಂಭ್ರಮದಲ್ಲಿರುವ ಹೆಣ್ಣಿಗೆ ಸೀಮಂತ ಬಹಳ ಮುಖ್ಯವಾದ ಹಬ್ಬ. ಈ ದಿನದಂದು ಬಂಧು ಮಿತ್ರರು ಜೊತೆಯಾಗಿ ಹೆಣ್ಣಿಗೆ ಹರಸುವ ದಿನ. ಅದರಲ್ಲೂ ಆಕೆಗೆ ಇಷ್ಟವಾಗುವ, ಸಂತೋಷ ನೀಡುವ ಉಡುಗೊರೆಗಳನ್ನು ನೀಡಿದರೆ ಈ ದಿನ ಮತ್ತಷ್ಟು ಅರ್ಥಪೂರ್ಣವಾಗಿರುತ್ತದೆ. ಈ ನಿಟ್ಟಿನಲ್ಲಿ ಸೀಮಂತದ ಕಾರ್ಯಕ್ರಮದಲ್ಲಿ ನೀಡಬಹುದಾದ ಉಡುಗೊರೆಗಳ ಪಟ್ಟಿ ಇಲ್ಲಿದೆ ನೋಡಿ.
ಮಗುವಿಗೆ ಚೆಂದದ ಹೆಸರಿನ ಪುಸ್ತಕ : ಮಗು ಹುಟ್ಟಿದ ಬಳಿಕ ಪ್ರತಿ ತಂದೆ ತಾಯಿಯರು ಮಗುವಿನ ಹೆಸರಿನ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸಂಸ್ಕೃತ, ರಾಜರು, ನಮ್ಮ ಸಂಸ್ಕೃತಿ ಸಾರುವಂತಹ ಅನೇಕ ಪುಸ್ತಕಗಳಿವೆ. ಅದನ್ನು ಸೀಮಂತಕ್ಕೆ ಉಡುಗೊರೆಯಾಗಿ ನೀಡಬಹುದು.
ಅತಿ ಸಿರಿವಂತರ ಅಚ್ಚುಮೆಚ್ಚಿನ ತಾಣ ಈ ಫೇಮಸ್ ಬೀಚ್ ಗಳು
ಮಗುವಿನ ಅಗತ್ಯ ವಸ್ತುಗಳ ಆರ್ಗನೈಜರ್ : ಮಗುವಿನ ಅಗತ್ಯ ವಸ್ತುಗಳಾದ ಆಯಿಲ್, ಪೌಡರ್, ಬಟ್ಟೆ ಇದೆಲ್ಲವನ್ನೂ ಮಂಚದ ಸಮೀಪವೇ ಇಡುವಂಥ ಆರ್ಗನೈಜರ್ಗಳನ್ನು ನೀಡಬಹುದು. ಇದು ತಾಯಿಗೆ ಹೆಚ್ಚು ರಿಲ್ಯಾಕ್ಸ್ ಎನಿಸುತ್ತದೆ.
ಡೈಪರ್ ಬ್ಯಾಗ್ : ಮಗುವಿಗೆ ಅಗತ್ಯವಾದ ಡೈಪರ್ಗಳನ್ನು ಸಂಗ್ರಹಿಸಿಡಲು ಡೈಪರ್ಬ್ಯಾಗ್ಗಳನ್ನು ನೀಡಬಹುದು. ಡೈಪರ್ಗಳನ್ನು ಎಲ್ಲೆಂದರಲ್ಲಿ ಇಡುವುದು ಮಗುವಿಗೂ ಇನ್ಫೆಕ್ಷನ್ ಆಗಬಹುದು. ಆದ್ದರಿಂದ ಡೈಪರ್ ಬ್ಯಾಗ್ ನೆರವಿಗೆ ಬರುತ್ತದೆ.
ಪ್ರೆಗ್ನೆಸ್ಸಿ ಜರ್ನಲ್ : ಎಳೆ ಕಂದಮ್ಮನನ್ನು ನೋಡಿಕೊಳ್ಳಲು ಅನುಕೂಲವಾಗುವಂತಹ ಪ್ರೆಗ್ನೆನ್ಸಿ ಜರ್ನಲ್ ನೀಡಬಹುದು. ಇದು ಹೊಸ ಪೋಷಕರಿಗೆ ಖಂಡಿತವಾಗಿಯೂ ನೆರವಿಗೆ ಬರುತ್ತದೆ.
ಮ್ಯಾಟ್ರಸ್ ಶೀಟ್ : ಎಳೆ ಕಂದಮ್ಮಗಳು ಬೇಗನೆ ನೈಸರ್ಗಿಕ ಕ್ರಿಯೆಗಳನ್ನು ಮಾಡಿಕೊಳ್ಳುವುದರಿಂದ ಅವುಗಳ ಸ್ವಚ್ಚತೆ ಬಗ್ಗೆ ಗಮನ ವಹಿಸಬೇಕು. ಈ ನಿಟ್ಟಿನಲ್ಲಿ ಮ್ಯಾಟ್ರಸ್ ಶೀಟ್ ನೆರವಿಗೆ ಬರುತ್ತದೆ. ಇದನ್ನು ಕೂಡ ಉಡುಗೊರೆಯಾಗಿ ನೀಡಬಹುದು.