alex Certify ಸೀಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ನಿವಾರಣೆಯಾಗುತ್ತೆ ಒತ್ತಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ನಿವಾರಣೆಯಾಗುತ್ತೆ ಒತ್ತಡ

ವಿಟಮಿನ್‌ ಸಿ ಯ ಪ್ರಮುಖ ಮೂಲವಾಗಿರುವ ಪೇರಳೆ ಹಣ್ಣು ಬಹುತೇಕ ಜನರಿಗೆ ಅಚ್ಚುಮೆಚ್ಚು. ಇದರಲ್ಲಿರುವ ವಿಟಮಿನ್‌ ಸಿ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್‌ ಸಿ ಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಇದನ್ನು ಕಚ್ಚಿ ತಿಂದರೂ ಚೆನ್ನ, ಕತ್ತರಿಸಿ ಉಪ್ಪು ಖಾರ ಉದುರಿಸಿ ತಿಂದರೂ ರುಚಿಯಾಗಿರುತ್ತದೆ. ಅದರಲ್ಲೂ ಈ ಹಣ್ಣಿನ ಜ್ಯೂಸ್‌ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.

ನಾರಿನಂಶ ಅಧಿಕವಾಗಿರುವ ಕಾರಣ ಪೇರಳೆ ಹಣ್ಣಿನ ಜ್ಯೂಸ್‌ ಸೇವನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸುಲಭವಾಗಿ ತಯಾರಿಸಬಹುದಾದ ಈ ಜ್ಯೂಸ್ ನ ಇತರ ಆರೋಗ್ಯ ಪ್ರಯೋಜನಗಳು ಹೀಗಿವೆ.

* ಪೇರಳೆ ಹಣ್ಣಿನಲ್ಲಿ ಮೆಗ್ನೀಷಿಯಂ ಯಥೇಚ್ಛ ಪ್ರಮಾಣದಲ್ಲಿದ್ದು, ಇದು ಸ್ನಾಯುಗಳಿಗೆ ರಿಲ್ಯಾಕ್ಸ್‌ ನೀಡುತ್ತದೆ. ಇದರಿಂದ ಒತ್ತಡ ಕಡಿಮೆಯಾಗಿ ಆತಂಕ ದೂರವಾಗುತ್ತದೆ. ಆದ್ದರಿಂದ ದೇಹ ಮತ್ತು ಮನಸ್ಸು ದಣಿದಿದ್ದಾಗ ಪೇರಳೆ ಜ್ಯೂಸ್‌ ಕುಡಿದರೆ ತುಂಬಾ ಒಳ್ಳೆಯದು.

* ಇದರಲ್ಲಿ ವಿಟಮಿನ್‌ ಎ ಕೂಡ ಅಧಿಕ ಪ್ರಮಾಣದಲ್ಲಿರುವ ಕಾರಣ ಇದರ ಸೇವನೆಯಿಂದ ಕಣ್ಣಿನ ಆರೋಗ್ಯವೂ ಹೆಚ್ಚುತ್ತದೆ. ಇದು ಕಣ್ಣಿನ ಸೋಂಕು ಮುಂತಾದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.

* ಈ ಹಣ್ಣಿನಲ್ಲಿ ಆ್ಯಂಟಿ ಮೈಕ್ರೊಬಿಯಲ್‌ ಅಂಶ ಮತ್ತು ನಾರಿನಂಶ ಹೆಚ್ಚಿರುವ ಕಾರಣ ಅಜೀರ್ಣತೆ, ಆಮಶಂಕೆ ಮುಂತಾದ ಉದರ ಸಂಬಂಧಿ ಸಮಸ್ಯೆಗಳನ್ನು ದೂರವಿಟ್ಟು ಜೀರ್ಣಾಂಗ ವ್ಯೂಹವನ್ನು ಆರೋಗ್ಯವಾಗಿಡುತ್ತದೆ.

* ಅತ್ಯಂತ ಕಡಿಮೆ ಕ್ಯಾಲೊರಿ ಹೊಂದಿರುವ ಈ ಹಣ್ಣಿನಲ್ಲಿ ಖನಿಜಾಂಶ ಮತ್ತು ವಿಟಮಿನ್‌ಗಳು ಅಧಿಕ ಪ್ರಮಾಣದಲ್ಲಿವೆ.

* ಪೇರಳೆ ಹಣ್ಣಿನ ಜ್ಯೂಸ್‌ ನಲ್ಲಿ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣವಿದೆ. ಇದು ಸೋಂಕು ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಕಾರಿಯಾಗಿದೆ.

* ಇದರಲ್ಲಿರುವ ವಿಟಮಿನ್ಸ್‌ ಮತ್ತು ಖನಿಜಾಂಶ, ಆಂಟಿ ಏಜಿಂಗ್ ಗುಣ ಚರ್ಮದ ಆರೋಗ್ಯವನ್ನು ಹೆಚ್ಚಿಸಿ ಮೊಡವೆ, ಸುಕ್ಕು ಮುಂತಾದ ತೊಂದರೆಗಳನ್ನು ನಿವಾರಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...