ಸೀತಾಫಲ ಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಆ ಹಣ್ಣಿನ ಬೀಜಗಳಿಂದಲೂ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ.
ಸೀತಾಫಲ ಹಣ್ಣಿನಲ್ಲಿ ಮಾತ್ರ ಅಲ್ಲ, ಬೀಜದಲ್ಲಿ, ಈ ಹಣ್ಣಿನ ತೊಗಟೆಯ ಎಲೆಗಳಲ್ಲಿ ಆರೋಗ್ಯಕ್ಕೆ ಲಾಭಗಳು ಇವೆ. ಸೀತಾಫಲ ಹಣ್ಣಿನ ಎಲೆಯನ್ನು ಅಥವಾ ತೊಗಟೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಮತ್ತು ಹೇನುಗಳ ಸಮಸ್ಯೆ ದೂರವಾಗುತ್ತದೆ.
ಇದನ್ನು ಗಾಯದ ಮೇಲೆ ಹಚ್ಚುವುದರಿಂದ ನೋವು ಮತ್ತು ಗಾಯ ಬೇಗನೆ ಗುಣವಾಗುತ್ತದೆ. ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆ ನೋವು ಹಾಗೂ ಹೊಟ್ಟೆಉರಿ ಕಡಿಮೆ ಆಗುತ್ತದೆ.
ಋತು ಸ್ರಾವದಲ್ಲಿ ಹೆಣ್ಣು ಮಕ್ಕಳು ಈ ಹಣ್ಣನ್ನು ತಿನ್ನುವುದರಿಂದ ಹೊಟ್ಟೆ ನೋವು, ಸೊಂಟ ನೋವು ಮತ್ತು ಇನ್ನಿತರ ಸಮಸ್ಯೆಗಳು ಕೂಡ ದೂರ ಆಗುತ್ತದೆ.
ಸೀತಾಫಲ ಹಣ್ಣಿನ ತೊಗಟೆಯಿಂದ ಮಾಡುವ ಕಷಾಯವನ್ನು ಸೇವನೆ ಮಾಡುವುದರಿಂದ ಬೇಧಿ ಮತ್ತು ಆಮಶಂಕೆಯಂತಹ ಸಮಸ್ಯೆಗಳು ಕಡಿಮೆ ಆಗುತ್ತದೆ.
ಸೀತಾಫಲ ಹಣ್ಣು ತಿನ್ನುವುದರಿಂದ ಹಿಮೋಗ್ಲೋಬಿನ್ ಅಂಶವು ಹೆಚ್ಚಾಗುತ್ತದೆ. ಡಯಾಟರಿ ಫೈಬರ್ ಇರುವುದರಿಂದ ಇದು ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ನೆರವಾಗುತ್ತದೆ.