alex Certify ‘ಸೀಗೆಕಾಯಿ’ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೀಗೆಕಾಯಿ’ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್

ಕೂದಲಿಗೆ ಹರ್ಬಲ್​ ಕೇರ್​ ಎಂದಿಗೂ ಪರಿಣಾಮಕಾರಿ ಎನಿಸಿಕೊಂಡಿದೆ. ಮನೆಯ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಮೂಲಿಕೆಗಳು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿವೆ.

ಅದರಲ್ಲೂ ಆ್ಯಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್ಸ್​ ಗಳನ್ನು ಹೊಂದಿರುವ ಸೀಗೆಕಾಯಿ ಬಳಕೆಯಿಂದ ಕೂದಲು ಸದೃಢಗೊಳ್ಳುವುದರ ಜೊತೆಗೆ ಹೊಳಪಿನಿಂದ ಕೂಡಿರುತ್ತದೆ. ಸೀಗೆಕಾಯಿಯನ್ನು ಯಾವೆಲ್ಲಾ ರೀತಿಯಲ್ಲಿ ಬಳಸಬಹುದು ನೋಡಿ.

ಸೀಗೆಕಾಯಿ ಮತ್ತು ಆಮ್ಲಾ ಪೌಡರ್​ : ಕೂದಲು ತುಂಡಾಗುವುದು ಮತ್ತು ಸೀಳು ಒಡೆಯುವ ಸಮಸ್ಯೆಗೆ ಸೀಗೆಕಾಯಿ ಮತ್ತು ಆಮ್ಲ ಉತ್ತಮ ಪರಿಹಾರ. ಈ ಮಿಶ್ರಣಕ್ಕೆ ಸ್ವಲ್ಪ ಬೆಚ್ಚಗಿನ ನೀರು ಸೇರಿಸಿ ಪೇಸ್ಟ್​ ತಯಾರಿಸಿ ಕೂದಲಿಗೆ ಹಚ್ಚಿ. 30 ನಿಮಿಷದ ನಂತರ ತಂಪಾದ ನೀರಿನಿಂದ ಕೂದಲನ್ನು ತೊಳೆಯಿರಿ. ಎರಡು ದಿನಕ್ಕೊಮ್ಮೆ ಈ ರೀತಿ ಮಾಡುವುದರಿಂದ ಕೂದಲು ಆರೋಗ್ಯವಾಗಿರುತ್ತದೆ.

ಸೀಗೆಕಾಯಿ ಮತ್ತು ಮೊಸರು : ಕೂದಲಿಗೆ ಮೊಸರಿನ ಬಳಕೆ ಉತ್ತಮ ವಿಧಾನ. ಡ್ಯಾಂಡ್ರಫ್​ ಹಾಗೂ ಒರಟಾದ ಕೂದಲಿನ ಸಮಸ್ಯೆಗೆ ಮೊಸರಿನ ಬಳಕೆ ಉತ್ತಮ ಪರಿಹಾರ. ಒಂದು ಚಮಚ ಮೆಂತ್ಯೆ ಪುಡಿ, ಒಂದು ಚಮಚ ಸೀಗೆಕಾಯಿ ಪುಡಿ, ಒಂದು ಚಮಚ ಆಮ್ಲಾ ಪುಡಿ, ಒಂದು ಕಪ್​ ಮೊಸರು ಸೇರಿಸಿ 2-3 ತಾಸು ಹಾಗೆ ಬಿಡಿ. ಇದನ್ನು ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

ಸೀಗೆಕಾಯಿ ಮತ್ತು ತೆಂಗಿನ ಎಣ್ಣೆ : ಸೀಗೆಕಾಯಿ ಪುಡಿಗೆ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ಸೇರಿಸಿ ಕೂದಲು ಮತ್ತು ಸ್ಕಾಲ್ಪ್ ​ಗೆ ಹಚ್ಚಿ, 10 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಡ್ರೈ ಹೇರ್​ ಸಮಸ್ಯೆ ದೂರವಾಗುತ್ತದೆ.

ಸೀಗೆಕಾಯಿ ಮತ್ತು ನೆಲ್ಲಿಕಾಯಿ : ಸ್ವಲ್ಪ ಸೀಗೆಕಾಯಿ ಪುಡಿಗೆ, ನೆಲ್ಲಿಕಾಯಿ ಪುಡಿ, ಅಕ್ಕಿ ಹಿಟ್ಟು ಹಾಗೆ ಎಗ್​ ವೈಟ್​ ಸೇರಿಸಿ, ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಹಚ್ಚಿ ಒಂದು ತಾಸು ಆರಲು ಬಿಡಿ. ನಂತರ ಶ್ಯಾಂಪು ಜೊತೆ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ನೈಸರ್ಗಿಕವಾಗಿಯೇ ನೇರವಾಗುತ್ತದೆ ಮತ್ತು ಉತ್ತಮ ಕಾಂತಿ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...