ಸೀಗೆಕಾಯಿ ಕೂದಲಿಗೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆಯುರ್ವೇದದಲ್ಲಿ ಕೂದಲಿನ ಚಿಕಿತ್ಸೆಗೆ ಇದನ್ನು ಬಳಸುತ್ತಾರೆ. ಇದನ್ನು ಬಳಸಿ ಉದ್ದವಾದ, ಕಪ್ಪಾದ, ದಪ್ಪವಾದ ಕೂದಲನ್ನು ಪಡೆಯಬಹುದು. ಹಾಗಾಗಿ ಸೀಗೆಕಾಯಿಯನ್ನು ಕೂದಲಿಗೆ ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ.
2 ಚಮಚ ಸೀಗೆಕಾಯಿ ಪುಡಿಯನ್ನು ತೆಗೆದುಕೊಂಡು, ಅದಕ್ಕೆ ಅಂಟುವಾಳ ಪುಡಿ 1 ಚಮಚ, 2 ಚಮಚ ನೆಲ್ಲಿಕಾಯಿ ಪುಡಿ, ಸೇರಿಸಿ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ, 2 ಗಂಟೆಗಳ ಕಾಲ ಬಿಟ್ಟು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.
ಇದರಿಂದ ಕೂದಲು ವಯಸ್ಸಾಗುವ ಮುನ್ನ ಬೆಳ್ಳಗಾಗುವುದನ್ನು ತಡೆಯಬಹುದು. ತಲೆಹೊಟ್ಟನ್ನು ನಿವಾರಿಸಬಹುದು. ಕೂದಲು ದಪ್ಪವಾಗಿ, ಉದ್ದವಾಗಿ ಹೊಳೆಯುವಂತೆ ಮಾಡುತ್ತದೆ.