alex Certify ಸಿ.ಟಿ. ರವಿ ಕೋಟಿ ರವಿಯಾಗಿದ್ದು ಹೇಗೆ?; 49 ಲಕ್ಷ ಇದ್ದ ಆಸ್ತಿ 5 ಕೋಟಿಗೂ ಅಧಿಕವಾದದ್ದು ಎಲ್ಲಿಂದ ? ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿ.ಟಿ. ರವಿ ಕೋಟಿ ರವಿಯಾಗಿದ್ದು ಹೇಗೆ?; 49 ಲಕ್ಷ ಇದ್ದ ಆಸ್ತಿ 5 ಕೋಟಿಗೂ ಅಧಿಕವಾದದ್ದು ಎಲ್ಲಿಂದ ? ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರನ್ನು ಲೂಟಿ ರವಿ ಎಂದು ಕರೆದಿರುವ ಕಾಂಗ್ರೆಸ್, ಕೋಟಿ ರವಿಯಾಗಿದ್ದು ಹೇಗೆ ಎಂದು ಪ್ರಶ್ನಿಸಿದೆ.

2004-2010 ರ ಮಧ್ಯೆ 49 ಲಕ್ಷದಿಂದ 3.18 ಕೋಟಿಗೇರಿದ ಸಿ.ಟಿ. ರವಿ ಆಸ್ತಿ ಬಗ್ಗೆ ದೂರು ದಾಖಲಾಗಿತ್ತು. 2018ರಲ್ಲಿ ನೀವೇ ಘೋಷಿಸಿದ ಅಧಿಕೃತ ಆಸ್ತಿ 5 ಕೋಟಿಗೂ ಅಧಿಕ, ನಿಮ್ಮ ಕುಟುಂಬದ್ದು ಇನ್ನೂ ಅಧಿಕ, ಬೇನಾಮಿ ಅತ್ಯಧಿಕ. ಹಿಂದುತ್ವ ಜಪದಿಂದ ಈ ಪ್ರಮಾಣದ ಆಸ್ತಿ ಸಂಪಾದಿಸಬಹುದೇ ಲೂಟಿ ರವಿಯವರೇ ಎಂದು ಪ್ರಶ್ನಿಸಿದೆ.

ಸಂಬಂಧಿಯನ್ನು ಮುಂದಿಟ್ಟುಕೊಂಡು ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆಗಳನ್ನು ಪಡೆದಿರುವ ನೀವು ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೀರ ? ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಿದ್ದ ಅಂದಿನ ಬಜರಂಗದಳ ಕಾರ್ಯಕರ್ತ, ಇಂದಿನ ಫುಲ್ ಟೈಂ ರಾಜಕಾರಣಿ ಕೋಟಿ ರವಿಯಾಗಿದ್ದು ಹೇಗೆ ? ಎಲ್ಲಿ, ಯಾರಿಂದ, ಎಷ್ಟು ಕಲೆಕ್ಷನ್ ಮಾಡಿದಿರಿ ? ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...