ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜ಼ಾದ್ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸೆಣಸಲಿದ್ದಾರೆ.
ಜನವರಿ 18 ರಂದು, ಆಜಾದ್ ಸಮಾಜ ಪಕ್ಷವು ಯುಪಿ ವಿಧಾನಸಭಾ ಚುನಾವಣೆಯ ಆರಂಭಿಕ ಹಂತದ ಮತದಾನಕ್ಕಾಗಿ 33 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆಗ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸ್ಪರ್ಧಿಸಲಿರುವ ಕ್ಷೇತ್ರದ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇಂದು ಯೋಗಿ ವಿರುದ್ಧ ನೆಕ್‌ಟುನೆಕ್ ಫೈಟ್ ಗೆ ಆಜ಼ಾದ್ ತಯಾರಾಗಿದ್ದಾರೆ ಎಂದು ಪಕ್ಷ ತಿಳಿಸಿದೆ.
ಸಮಾಜವಾದಿ ಪಕ್ಷದ ನಡುವಿನ ಮೈತ್ರಿಯನ್ನು ಖಚಿತಪಡಿಸಿದ ಕೆಲವೇ ಗಂಟೆಗಳ ನಂತರ, ಉತ್ತರ ಪ್ರದೇಶ ಚುನಾವಣೆಯಲ್ಲಿ ಆಜಾದ್ ಸಮಾಜ ಪಕ್ಷ ಏಕಾಂಗಿಯಾಗಿ ಸೆಣೆಸಲಿದೆ ಎಂದು ಚಂದ್ರಶೇಖರ್ ಆಜ಼ಾದ್ ಹೇಳಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಮತ್ತೊಂದು ಹಸಿರು ಕ್ರಾಂತಿ: RBI
ಯುಪಿ ವಿಧಾನಸಭಾ ಚುನಾವಣೆಯು ಆಜ಼ಾದ್ ಸಮಾಜ ಪಕ್ಷದ ಎರಡನೇ ಪ್ರಮುಖ ಚುನಾವಣೆ. ರಚನೆಯಾಗಿ ಎರಡು ವರ್ಷಗಳಲ್ಲಿ ಈ ಪಕ್ಷವು ಎರಡನೇ ಪ್ರಮುಖ ಚುನಾವಣೆಗೆ ಸಿದ್ಧವಾಗಿದೆ. 2020 ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿತ್ತು.
ಆಜ಼ಾದ್ ಅವರು ಚುನಾವಣೆಯಲ್ಲಿ ಎದುರಿಸುತ್ತಿರುವ ಮೊದಲನೆ ಅತಿ ದೊಡ್ಡ ನಾಯಕ ಯೋಗಿ ಆದಿತ್ಯನಾಥ್ ಆಗಿದ್ದರು, ಈ ಹಿಂದೆ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ತಯಾರಾಗಿದ್ದರು. ದಲಿತ ನಾಯಕ ಎಂದು ಘೋಷಿಸಿಕೊಂಡಿರುವ ಆಜ಼ಾದ್, 2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ಮೋದಿಯವರ ವಿರುದ್ಧ ವಾರಾಣಾಸಿಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಇತ್ತ ಮೊದಲ ಬಾರಿಗೆ ಸಿಎಂ ಯೋಗಿ, ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ. ತಮ್ಮ ತವರಾದ ಗೋರಖ್ ಪುರ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಿದ್ಧವಾಗಿದ್ದಾರೆ. ಸಿಎಂ ಯೋಗಿ ಈ ಹಿಂದೆ, ಇದೇ ಗೋರಖ್ ಪುರ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿದ್ದಾರೆ.