ಸಿಹಿ ಪ್ರಿಯರ ಬಾಯಲ್ಲಿ ನೀರೂರಿಸುವ ರವಾ ಕೇಸರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ.
ರವಾ ಕೇಸರಿಗೆ ಬೇಕಾಗುವ ಸಾಮಗ್ರಿಗಳು :
ರವೆ – 1 ಕಪ್, ತುಪ್ಪ – 1 ಕಪ್, ಸಕ್ಕರೆ – 2 ಕಪ್, ನೀರು – ಮೂರು ಕಪ್, ಗೋಡಂಬಿ – 10, ಒಣ ದ್ರಾಕ್ಷಿ – 10, ಏಲಕ್ಕಿ – 3-4 ಪುಡಿ, ಕೇಸರಿ ಪುಡಿ ಸ್ವಲ್ಪ
ರವಾ ಕೇಸರಿ ಮಾಡುವ ವಿಧಾನ :
ರವೆಯನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಬಿಸಿ ಬರುವವರೆಗೆ ಹುರಿದುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತ್ರ ಗೋಡಂಬಿ, ಒಣ ದ್ರಾಕ್ಷಿ ಹಾಕಿ ಪ್ರೈ ಮಾಡಿ ಪಕ್ಕಕ್ಕಿಡಿ. ಉಳಿದ ತುಪ್ಪವನ್ನು ರವೆಗೆ ಹಾಕಿ ಸ್ವಲ್ಪ ಹುರಿದುಕೊಳ್ಳಿ.
ನಂತ್ರ ಮೂರು ಕಪ್ ನೀರನ್ನು ಕುದಿಸಿ ಅದಕ್ಕೆ ಕೇಸರಿ ಪುಡಿ ಹಾಕಿ. ನಂತ್ರ ತುಪ್ಪದಲ್ಲಿ ಹುರಿದ ರವೆಯನ್ನು ನೀರಿಗೆ ಸೇರಿಸಿ. ಸರಿಯಾಗಿ ಮಿಕ್ಸ್ ಮಾಡಿ. ಸಕ್ಕರೆಯನ್ನು ಈ ಮಿಶ್ರಣಕ್ಕೆ ಹಾಕಿ. ಸಣ್ಣ ಉರಿಯಲ್ಲಿ ಕೇಸರಿ ಬಣ್ಣ ಬಿಡಲು ಬರುವವರೆಗೆ ಬೇಯಿಸಿ. ನಂತ್ರ ಏಲಕ್ಕಿ ಪುಡಿ, ಹುರಿದ ಗೋಡಂಬಿ, ಒಣದ್ರಾಕ್ಷಿ ಹಾಕಿ ಮಿಕ್ಸ್ ಮಾಡಿ.