2 ಕಪ್ ಕಡಲೆ ಹಿಟ್ಟು
1 ಕಪ್ ಸಕ್ಕರೆ
½ ಕಪ್ ತುಪ್ಪ
5-7 ಬಾದಾಮಿ
5-6 ಗೋಡಂಬಿ
2-4 ಏಲಕ್ಕಿ
ಬೇಸನ್ ಲಾಡು ಮಾಡುವ ವಿಧಾನ :
ಗೋಡಂಬಿ, ಬಾದಾಮಿಯನ್ನು ಸಣ್ಣಗೆ ಕಟ್ ಮಾಡಿಕೊಳ್ಳಿ. ಏಲಕ್ಕಿ ಸಿಪ್ಪೆ ತೆಗೆದು ಬೀಜವನ್ನು ಪುಡಿ ಮಾಡಿಕೊಳ್ಳಿ.
ಕಡಲೆ ಹಿಟ್ಟನ್ನು ಸ್ವಚ್ಛಗೊಳಿಸಿಕೊಳ್ಳಿ.
ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ನಂತ್ರ ಕಡಲೆ ಹಿಟ್ಟನ್ನು ಹಾಕಿ, ಕಡಿಮೆ ಉರಿಯಲ್ಲಿ 10-15 ನಿಮಿಷ ಹುರಿಯಿರಿ.
ಕಡಲೆ ಹಿಟ್ಟು ಸರಿಯಾಗಿ ಹುರಿದ ನಂತ್ರ ಗ್ಯಾಸ್ ಬಂದ್ ಮಾಡಿ ಬೇರೆ ಪಾತ್ರೆಗೆ ಹಾಕಿ.
ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ಪುಡಿಯನ್ನು ಹಾಕಿ.
ನಂತ್ರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಇದನ್ನು ಫ್ರಿಜ್ ಇಲ್ಲದೆ ಸುಮಾರು ಒಂದು ತಿಂಗಳವರೆಗೆ ಹಾಗೆಯೇ ಇಡಬಹುದು.