ಸಿಹಿ ಗೆಣಸಿನಲ್ಲಿ ವಿಟಮಿನ್ ಬಿ6, ಕ್ಯಾಲ್ಸಿಯಂ, ಸೋಡಿಯಂ, ಮ್ಯಾಗ್ನಿಷಿಯಂ, ನಾರಿನ ಅಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಗಳಿವೆ.
ಸಿಹಿ ಗೆಣಸನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಸೋಂಕು ಹರಡದಂತೆ ತಡೆಯುತ್ತದೆ. ಸಿಹಿ ಗೆಣಸಿನಲ್ಲಿ ಪೊಟ್ಯಾಷಿಯಂ ಉನ್ನತ ಮಟ್ಟದಲ್ಲಿದೆ. ಹೃದಯದ ಬಡಿತವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಬೀಟಾ ಕೆರೋಟಿನ್ ಅಂಶ ಹೆಚ್ಚಾಗಿ ಸಿಹಿ ಗೆಣಸಿನಲ್ಲಿ ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಸಕ್ಕರೆ ಕಾಯಿಲೆ ಇರುವವರಿಗೆ ಇದು ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಸಕ್ಕರೆ ಕಾಯಿಲೆ ಇರುವವರು ಸಿಹಿ ಗೆಣಸು ತಿನ್ನುವ ಮೊದಲು ವೈದ್ಯರ ಸಲಹೆಯನ್ನು ಪಡೆಯಬೇಕು.
ಸಿಹಿ ಗೆಣಸು ನಿಯಮಿತವಾಗಿ ಸೇವನೆ ಮಾಡುವುದರಿಂದ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುವುದಿಲ್ಲ. ಸಂಧಿವಾತ ಮತ್ತು ಅಸ್ತಮಾ ಸಮಸ್ಯೆಗೆ ಉಪಶಮನ ದೊರೆಯುತ್ತದೆ.