alex Certify ಸಿಹಿ ಗೆಣಸಿನ ಔಷಧೀಯ ಗುಣಗಳು ಏನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಹಿ ಗೆಣಸಿನ ಔಷಧೀಯ ಗುಣಗಳು ಏನು ಗೊತ್ತಾ….?

ಸಿಹಿಗೆಣಸು ಉತ್ತಮ ತರಕಾರಿ ಮಾತ್ರವಲ್ಲದೆ ಆರೋಗ್ಯಕರವಾದ ಅಲ್ಪಾಹಾರ. ಇದನ್ನು ಬೇಯಿಸಿ, ಸುಟ್ಟು ತಿನ್ನುವವರು ಸಾಕಷ್ಟು ಜನರಿದ್ದಾರೆ. ಆದ್ದರಿಂದಲೇ ಈ ಗಡ್ಡೆಗಳನ್ನು ಕಂಡೊಡನೆ ಅನೇಕರ ಬಾಯಲ್ಲಿ ನೀರೂರುತ್ತದೆ. ಹಾಗಾದರೆ ಇದರಲ್ಲಿ ಅಡಗಿರುವ ಔಷಧೀಯ ಗುಣಗಳು ಏನೆಂದು ತಿಳಿಯೋಣ.

* ಅಧಿಕ ಪ್ರಮಾಣದಲ್ಲಿರುವ ನಾರು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಮತ್ತು ಮಲಬದ್ಧತೆ ನಿವಾರಿಸುತ್ತದೆ. ಜೀರ್ಣಕೋಶವನ್ನು ಸ್ವಚ್ಛ ಗೊಳಿಸುತ್ತದೆ.

* ಇದರಲ್ಲಿ ಹೆಚ್ಚಾಗಿರುವ ವಿಟಮಿನ್ ಬಿ6 ದೇಹದಲ್ಲಿ ಬಿಡುಗಡೆಯಾಗುವ ಹೋಮೋಸಿಸ್ಟಿನ್ ಎನ್ನುವ ರಾಸಾಯನಿಕವನ್ನು ಕಡಿಮೆ ಮಾಡುತ್ತದೆ. ಇದರಿಂದ ಅನೇಕ ರೋಗಗಳು ಮುಖ್ಯವಾಗಿ ಹೃದ್ರೋಗ ಎದುರಿಸುವ ಶಕ್ತಿ ಉಂಟಾಗುತ್ತದೆ.

* ಸಿಟ್ರಸ್ ಜಾತಿಯ ಹಣ್ಣುಗಳಂತೆ ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ದೇಹದ ಜೈವಿಕ ಕ್ರಿಯೆಗಳಿಗೆ ಅಗತ್ಯವಾದ ಮೆಗ್ನೀಶಿಯಂ, ಪೊಟಾಶಿಯಂ ಅಂತಹ ಅನೇಕ ಖನಿಜಗಳು ಇರುತ್ತವೆ.

* ಕಿತ್ತಳೆ ಬಣ್ಣದಲ್ಲಿರುವ ಸಿಹಿ ಗೆಣಸಿನಲ್ಲಿ ಕೆರೋಟಿನಾಯ್ಡ್ ಹೆಚ್ಚು. ಇವು ದೃಷ್ಟಿ ತೀಕ್ಷ್ಣತೆ ಹೆಚ್ಚಿಸುತ್ತದೆ.

* ಬದನೆಕಾಯಿ ಬಣ್ಣದಲ್ಲಿರುವ ಸಿಹಿಗೆಣಸು ಆಂಟಿ ಆಕ್ಸಿಡೆಂಟ್ ನಂತೆ ಕಾರ್ಯನಿರ್ವಹಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಇದು ಮಧುಮೇಹಿಗಳಿಗೆ ಉತ್ತಮ ಆಹಾರ. ಯಾಕೆಂದರೆ ರಕ್ತದಲ್ಲಿ ಸಕ್ಕರೆ ಸಂಗ್ರಹಣೆಯನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...