ಸಿಹಿ ಆಲೂಗಡ್ಡೆ ನೈಸರ್ಗಿಕವಾದ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು ಎನ್ನಲಾಗುತ್ತದೆ. ಆದರೆ ಈ ಆಲೋಚನೆ ತಪ್ಪು ಎನ್ನಲಾಗುತ್ತಿದೆ.
ಹೌದು. ಆಯುರ್ವೇದ ಹಾಗೂ ಎನ್ಸಿಬಿಐ ಪ್ರಕಾರ ಸಿಹಿ ಆಲೂಗಡ್ಡೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಾಕಾರಿಯಾಗಿದೆ ಎನ್ನಲಾಗಿದೆ.
ಆಯುರ್ವೇದದ ಪ್ರಕಾರ ಸಿಹಿ ಆಲೂಗಡ್ಡೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಸರಿಯಾಗಿ ಇಡುತ್ತದೆ. ಆದಕಾರಣ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವು ಹೆಚ್ಚಾಗುವುದಿಲ್ಲ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವಿಸಬಹುದು ಎನ್ನಲಾಗಿದೆ.
ಹಾಗೇ ಸಿಹಿ ಆಲೂಗಡ್ಡೆಯಲ್ಲಿರುವ ಪೋಷಕಾಂಶ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಇದು ನೆಲದೊಳಗೆ ಬೆಳೆಯುವುದರಿಂದ ಲೋಹದ ಅಂಶ ಹೇರಳವಾಗಿರುತ್ತದೆ. ಇದು ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎನ್ ಸಿ ಬಿ ಐ ಸಂಶೋಧನೆಯಿಂದ ತಿಳಿದು ಬಂದಿದೆ.