ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನುವ ಆಸೆ ಆಗುತ್ತಿದ್ದರೆ ಒಮ್ಮೆ ಈ ಸಿಹಿ ಕುಂಬಳಕಾಯಿ ಹಲ್ವಾ ಮಾಡಿಕೊಂಡು ಸವಿಯಿರಿ. ಹಾಗೇ ಸಕ್ಕರೆ ಇಷ್ಟಪಡದವರು ಬೆಲ್ಲ ಸೇರಿಸಿಕೊಂಡು ಈ ಹಲ್ವಾ ಮಾಡಿಕೊಂಡು ಸವಿಯಬಹುದು.
ದಪ್ಪ ತಳದ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ. ನಂತರ 5 ಬಾದಾಮಿ ಪೀಸ್, 5 ಗೋಡಂಬಿ ಚೂರುಗಳನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ 3 ಕಪ್ ತುರಿದ ಸಿಹಿ ಕುಂಬಳಕಾಯಿ ತುರಿಯನ್ನು ಹಾಕಿ ಅದರ ಹಸಿವಾಸನೆ ಹೋಗುವವರೆಗೆ ಹುರಿದುಕೊಳ್ಳಿ.
ನಂತರ ಅದಕ್ಕೆ 1 ಕಪ್ ಹಾಲು ಹಾಕಿ ಚೆನ್ನಾಗಿ ಕೈಯಾಡಿಸಿ. ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಮೆತ್ತಗೆ ಬೇಯಿಸಿಕೊಳ್ಳಿ. ನಂತರ 1 ಕಪ್ ಬೆಲ್ಲದ ಪುಡಿಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕುಂಬಳಕಾಯಿ ಮಿಶ್ರಣ ತಳ ಬಿಡುವವರಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ. ನಂತರ ಹುರಿದಿಟ್ಟುಕೊಂಡ ಗೋಡಂಬಿ, ಬಾದಾಮಿ ಹಾಕಿ ಸರ್ವ್ ಮಾಡಿ.