ಆಕೆ ತನ್ನ ಶಾಲೆ ಮುಗಿಸಿಕೊಂಡು ಸ್ನೇಹಿತೆಯರೊಂದಿಗೆ ಮನೆಗೆ ಮರಳುತ್ತಿದ್ದಳು. ಆಕೆ ಬರುತ್ತಿದ್ದನ್ನೆ ಕಾಯ್ದುಕೊಂಡಿದ್ದ ಕಿರಾತಕರ ಗುಂಪು ಆಕೆ ಮೇಲೆ ಮುಗಿಬಿದ್ದಿದೆ. ಅವರನ್ನ ವಿರೋಧಿಸಿದ ಬಾಲಕಿಯನ್ನ ತನ್ನ ಸಹಚರರೊಂದಿಗೆ ಹಿಂಬಾಲಿಸಿದ ಯುವಕ ಹದಿಮೂರು ಸೆಕೆಂಡ್ ನಲ್ಲಿ ಎಂಟು ಬಾರಿ ಇರಿದಿದ್ದಾನೆ.
ಡಿಸೆಂಬರ್ 19 ರಂದು ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಶಾಲೆಯಿಂದ ಮನೆಗೆ ಮರಳುತ್ತಿದ್ದಳು ಎಂದು ವರದಿ ತಿಳಿಸಿದೆ. ಏಕಾಏಕಿ ತನ್ನ ಸಹಚರರೊಂದಿಗೆ ಅಡಗಿ ಕುಳಿತಿದ್ದ ಆರೋಪಿ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಘಟನೆ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಒಬ್ಬ ವ್ಯಕ್ತಿಯು ಅವನನ್ನು ಎಳೆಯಲು ಪ್ರಯತ್ನಿಸುತ್ತಿರುವಾಗಲೂ ಆರೋಪಿಯು ಚಾಕುವಿನಿಂದ ಹುಡುಗಿಯನ್ನ ಪದೇ ಪದೇ ಇರಿಯುತ್ತಿರುವುದು ಸ್ಪಷ್ಟವಾಗಿದೆ.
ಘಟನೆ ನಡೆದ ತಕ್ಷಣ ಬಾಲಕಿಯನ್ನು ಗೋಪಾಲ್‌ಗಂಜ್‌ನಲ್ಲಿರುವ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಆಕೆಯನ್ನು ಉತ್ತಮ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆ ಆಕೆ ಓದಲು ಹೋಗುತ್ತಿದ್ದಾಗ ಆರೋಪಿ ಹಲವು ಬಾರಿ ಕಿರುಕುಳ ನೀಡಲು ಯತ್ನಿಸಿದ್ದ ಎಂದು ಸಂತ್ರಸ್ತೆ ಕುಟುಂಬ ಮಾಹಿತಿ ನೀಡಿದೆ.