ಟೈಮ್ ಚೆನ್ನಾಗಿದ್ರೆ ಎಂಥಾ ಅಪಾಯ ಬಂದ್ರೂ ಏನೂ ಆಗೋದಿಲ್ಲ ಅನ್ನೊ ಮಾತಿದೆ. ಇದಕ್ಕೆ ತಾಜಾ ಉದಾಹರಣೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟ ನೆಟ್ಟಗಿದ್ದಿದ್ದರಿಂದ ಇಡೀ ಕುಟುಂಬವೇ ಅಪಾಯದಿಂದ ಪಾರಾಗಿದೆ.
ಇಡೀ ಕುಟುಂಬದವರೆಲ್ಲ ಚಿಕ್ಕ ಕೋಣೆಯೊಂದರಲ್ಲಿ ಕುಳಿತಿದ್ರು. ಚಿಕ್ಕ ಬಾಲಕಿ, ಅವಳ ತಾಯಿ ಹಾಗೂ ಮತ್ತೆ ಕೆಲವರು ಅಕ್ಕಪಕ್ಕದಲ್ಲೇ ಕುಳಿತುಕೊಂಡಿದ್ದಾರೆ. ಒಂದಿಬ್ಬರು ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ ಮತ್ತವಳ ಮಗಳು ಸೀಲಿಂಗ್ ಫ್ಯಾನ್ ಕೆಳಗಡೆಯೇ ಆಸೀನರಾಗಿದ್ದರು.
ಕೆಲವೇ ಸೆಕೆಂಡುಗಳಲ್ಲಿ ಫ್ಯಾನ್ ನಿಧಾನವಾಗಿ ದುರ್ಬಲಗೊಂಡು ಕೆಳಗೆ ಬೀಳಲು ಪ್ರಾರಂಭಿಸಿದೆ. ಈ ವೇಳೆ ಯಾರ ಗಮನವೂ ಅತ್ತ ಹೋಗಲೇ ಇಲ್ಲ. ಕೊನೆ ಕ್ಷಣದಲ್ಲಿ ಬಾಲಕಿ ಫ್ಯಾನ್ ಬೀಳ್ತಿರೋದನ್ನು ನೋಡಿದ್ದಾಳೆ, ತಾಯಿಗೆ ವಿಷಯ ತಿಳಿಸಿದ್ದಾಳೆ.
ಫ್ಯಾನ್ ಬೀಳ್ತಾ ಇರೋದನ್ನು ಗಮನಿಸಿದ ಮನೆಯ ಸದಸ್ಯರು ಗಾಬರಿಯಲ್ಲಿ ಅತ್ತಿಂದಿತ್ತ ಓಡಿದ್ದಾರೆ. ಸೀಲಿಂಗ್ ನಿಂದ ತುಂಡಾಗಿ ಫ್ಯಾನ್ ಕೆಳಕ್ಕೆ ಉದುರಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.