ಇತ್ತೀಚೆಗೆ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡಿರುವ ಘಟನೆಗಳು, ಪದೇ ಪದೇ ಬೆಳಕಿಗೆ ಬರುತ್ತಲೇ ಇವೆ. ಈಗ ಗ್ರೇಟರ್ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮನೆಯ ಕಾವಲುಗಾರನ ಮೇಲೆಯೇ ದಾಳಿ ನಡೆಸಿದೆ. ಈ ಘಟನೆ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಅದು ಗ್ರೇಟರ್ ನೋಯ್ಡಾದ ಸೆಕ್ಟೆರ್ ಪಿಐ 2ನಲ್ಲಿರುವ ಯುನಿಟೆಕ್ ಹರೈಸನ್ ಸೊಸೈಟಿಯದ್ದಾಗಿದೆ. ಈ ಸೊಸೈಟಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯ ಮೇಲೆ, ಅದೇ ಸೊಸೈಟಿಯಲ್ಲಿ ಇದ್ದ, ಸಾಕು ನಾಯಿಯೊಂದು ದಾಳಿ ಮಾಡಿದೆ.
ಈ ಘಟನೆ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋದಲ್ಲಿ ಕಾವಲುಗಾರ ಒಂದು ಟೇಬಲ್ ಹಿಂದೆ ಕುತಿರುತ್ತಾನೆ. ಆಗ ಎದುರು ಮನೆಯಿಂದ ಹೊರಗೆ ಬಂದ ಶ್ವಾನ ಓಡಿ ಬಂದು ಕಾವಲುಗಾರನ ಮೇಲೆ ದಾಳಿ ನಡೆಸುತ್ತೆ.
ತಕ್ಷಣವೇ ಕಾವಲುಗಾರ ತನ್ನ ಕೈಯಲ್ಲಿ ಇರುವ ಕೋಲಿನಿಂದ ನಾಯಿಯನ್ನ ಹೆದರಿಸಲು ನೋಡುತ್ತಾನೆ. ಆದರೂ ನಾಯಿ ಭಯಪಡದೇ ಕಾವಲುಗಾರನ ಮೇಲೆ ದಾಳಿ ಮಾಡಿ ಆತನ ಕೈಗೆ ಕಚ್ಚುತ್ತದೆ. ಅಲ್ಲೇ ಇದ್ದ ಬಾಲಕಿ ಓಡಿಬಂದು, ನಾಯಿ ಕೊರಳ ಪಟ್ಟಿಯನ್ನ ಹಿಡಿದು ಎಳೆಯುತ್ತಾಳೆ. ಅಷ್ಟರೊಳಗೆ ನಾಯಿ ಕಾವಲುಗಾರನ ಬಲಗೈ ಕಚ್ಚಿರುತ್ತೆ.
ನಾಯಿ ಸಾಕಿದ ಮಾಲೀಕರು ಕಾವಲುಗಾರನ ಕೈಯಲ್ಲಿ ಇದ್ದ ಕೋಲನ್ನ ತೆಗೆದುಕೊಂಡು ನಾಯಿಗೆ ಹೊಡೆಯುತ್ತಿರುವ ದೃಶ್ಯ ಹಾಗೂ ಅಲ್ಲೇ ಪಕ್ಕದಲ್ಲೇ ನಿಂತು ನೋವಿನಿಂದ ನರಳುತ್ತಿದ್ದ ದೃಶ್ಯವನ್ನ ಇಲ್ಲಿ ನೀವು ಗಮನಿಸಬಹುದು.
ಪದೇ ಪದೇ ನಾಯಿ ದಾಳಿ ಪ್ರಕರಣ ಜನ ಭಯದಿಂದಲೇ ಓಡಾಡುವ ಹಾಗಾಗಿದೆ. ಕೆಲವೇ ಕೆಲ ದಿನಗಳ ಹಿಂದಷ್ಟೆ ಏಳು ತಿಂಗಳ ಮಗು ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿತ್ತು. ಇನ್ನೂ ಕಳೆದ ತಿಂಗಳು ಸೆಕ್ಟರ್ 100ರ ಲೋಟೆಡ್ ಬೌಲೆವಾರ್ಡ್ ಸೊಸೈಟಿ ಆವರಣದಲ್ಲೂ ನಾಯಿ ಅಟ್ಯಾಕ್ ಮಾಡಿರುವ ಘಟನೆ ನಡೆದಿತ್ತು. ಕೂಲಿ ಮಾಡುತ್ತಿದ್ದ ಪಾಲಕರು ಮಗುವನ್ನ ಮಲಗಿಸಿ ಅಲ್ಲೇ ಕೆಳಗೆ ಬಿಟ್ಟು ಹೋಗಿದ್ದಾಗ ನಾಯಿ ಬಂದು ಮಗುವಿನ ಮೇಲೆ ದಾಳಿ ಮಾಡಿತ್ತು.
ನಾಯಿಗಳ ದಾಳಿ ಪ್ರಕರಣ ಪದೇ ಪದೇ ನಡೆಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅನ್ನುವುದು ಸ್ಥಳೀಯರ ವಾದವಾಗಿದೆ. ಆದರೆ ಸರ್ಕಾರ ಮಾತ್ರ ಈ ವಿಚಾರದಲ್ಲಿ ಮಾಡುವುದಾದರೂ ಏನು ಅನ್ನೊದು ಗೊತ್ತಾಗದೆಯೇ ತಲೆ ಕೆಡಿಸಿಕೊಂಡು ಕೂತಿರುವುದು ಸುಳ್ಳಲ್ಲ.