ಹೊಸವರ್ಷದ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಲು ಸಿದ್ಧರಾಗಿದ್ದವರನ್ನ ಮಾಲು ಸಮೇತ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳ ಸೆರೆ ಹಿಡಿದಿದೆ. ಮುಂಬೈ ನಿಂದ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡಿಕೊಂಡಿದ್ದ ಮೂವರು ನೈಜಿರೀಯನ್ ಪ್ರಜೆಗಳನ್ನ ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ನಗರದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮೇಲೆ ದಾಳಿ ಮಾಡಿದ ಸಿಸಿಬಿ, 80 ಲಕ್ಷ ಮೌಲ್ಯದ 400 ಗ್ರಾಂ. ಎಮ್ ಡಿ ಎಮ್ ಎ, 400 ಗ್ರಾಂ ಕೊಕೇನ್, ಹ್ಯಾಶಿಶ್ ಆಯಿಲ್ ವಶಕ್ಕೆ ಪಡೆದಿದೆ.
ಮುಂಬೈನಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ದ ನೈಜಿರೀಯನ್ ಪ್ರಜೆಗಳು, ಹೊಸ ವರ್ಷಕ್ಕೂ ಭರ್ಜರಿ ಪ್ಲ್ಯಾನ್ ಹಾಕಿಕೊಂಡಿದ್ದರು. ಫಿಯಾಮಾ ಸೋಪ್ ಬಾಕ್ಸ್ ನಲ್ಲಿ ಡ್ರಗ್ಸ್ ಇಟ್ಟು ಸರಬರಾಜು ಮಾಡಲು ಸಿದ್ಧವಾಗಿದ್ದರು. ಖಚಿತ ಮಾಹಿತಿ ಮೇರೆಗೆ ಇವರು ತಂಗಿದ್ದ ಮನೆಯ ಮೇಲೆ ದಾಳಿ ನಡೆಸಿ, ಡ್ರಗ್ಸ್ ಸಮೇತ ಕಳ್ಳರನ್ನ ಹಿಡಿದಿದೆ.
BIG NEWS: ತಪ್ಪಿದ ಭಾರಿ ದುರಂತ, ನಡುರಸ್ತೆಯಲ್ಲೇ ಹೊತ್ತಿ ಉರಿದ ನ್ಯಾನೋ ಕಾರ್
ಪ್ರಾಥಮಿಕ ತನಿಖೆಯಲ್ಲಿ ಈ ಮೂವರು ನೈಜಿರೀಯನ್ ಪ್ರಜೆಗಳೆಂದು ತಿಳಿದು ಬಂದಿದೆ. ಮೂವರು ಆರೋಪಿಗಳು ಬಿಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ, ವೀಸಾ ನಿಯಮ ಉಲ್ಲಂಘಿಸಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾರೆ. ಸದ್ಯ ಇವರ ವಿರುದ್ಧ ಡ್ರಗ್ಸ್ ಮಾರಾಟ ಹಾಗೂ ವೀಸಾ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡಿರುವ, ಬಾಗಲೂರು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.