ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗನ್ ಮಾಫಿಯಾ ಸದ್ದು ಮಾಡುತ್ತಿದೆ. ನಗರದಲ್ಲಿ ಮತ್ತೊಂದು ಗನ್ ಮಾಫಿಯ ಬಯಲಿಗೆ ಬಂದಿದ್ದು, ಹೊರರಾಜ್ಯಗಳಿಂದ ನಗರಕ್ಕೆ ಗನ್ ಸಪ್ಲೈ ಶುರುವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಹೆಸರೇ ಹೇಳುವಂತೆ ಯಾವುದೆ ಪರವಾನಿಗೆ ಇಲ್ಲದೆ ಗನ್ ಸಪ್ಲೈ ಆಗುತ್ತಿದ್ದು, ಮುಖ್ಯವಾಗಿ ಮಹಾರಾಷ್ಟ್ರದಿಂದ ಸಾಕಷ್ಟು ಸಂಖ್ಯೆಯಲ್ಲಿ ಗನ್ ಗಳು ಬೆಂಗಳೂರು ತಲುಪುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಗನ್ ಮಾಫಿಯಾ ಸಂಬಂಧ ಬೆಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಗರದ ಹಲವು ಕಡೆ ಅಕ್ರಮವಾಗಿ ಗನ್ ಮಾರಾಟದ ಶಂಕೆ ವ್ಯಕ್ತವಾಗುತ್ತಿದ್ದಂತೆ, ಪೊಲೀಸರು ತಮ್ಮ ಜಾಲವನ್ನು ಆ್ಯಕ್ಟೀವ್ ಮಾಡಿ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಪಕ್ಕಾ ಮಾಹಿತಿ ಪಡೆದ ಪೊಲೀಸರು, ಸ್ಯಾಟಲೈಟ್ ಬಸ್ ಸ್ಟಾಪ್ ಬಳಿ ಅಕ್ರಮವಾಗಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರನ್ನ ಬಂಧಿಸಿದ್ದಾರೆ.
ಬಂಧಿತರು ಮಹಾರಾಷ್ಟ್ರ ಮೂಲದವರು ಎಂದು ತಿಳಿದು ಬಂದಿದ್ದು, ಬಂಧಿತರಿಂದ ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳು ಸಹ ವಶಪಡಿಸಿಕೊಳ್ಳಲಾಗಿದೆ. ಇನ್ನು ಬಂಧಿತರಾದ ರಾಹುಲ್, ಸತೀಶ್ ಮಾನೆ ಮಹಾರಾಷ್ಟ್ರದ ಕೊಲ್ಲಾಪುರದ ನಿವಾಸಿ, ಇತ್ತ ರಫಿಕ್ ದಸ್ತಗಿರ್ ನಧಾಫ್ ಸಾಂಗ್ಲಿ ಜಿಲ್ಲೆಯವ ನಿವಾಸಿ. ಸಧ್ಯ ಇಬ್ಬರನ್ನು ಬಂಧಿಸಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದೇವೆ ಎಂದು ಬ್ಯಾಟರಾಯನಪುರ ಪೊಲೀಸರು ತಿಳಿಸಿದ್ದಾರೆ.