ನಟಿ ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯೊಂದಿಗೆ ಬಾಲಿವುಡ್ಗೆ ಮರಳಲು ಸಿದ್ಧರಾಗಿದ್ದಾರೆ. ಚಕ್ಡಾ ಎಕ್ಸ್ಪ್ರೆಸ್ ಚಿತ್ರಕ್ಕಾಗಿ ಅನುಷ್ಕಾ, ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಚಿತ್ರಗಳು ಮತ್ತು ವೀಡಿಯೊಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಈಗ ತಮ್ಮ ಮತ್ತೊಂದು ಪ್ರತಿಭೆಯನ್ನು ಅಭಿಮಾನಿಗಳ ಮುಂದಿಟ್ಟಿರುವ ಅನುಷ್ಕಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಹೌದು, ಅನುಷ್ಕಾ ತನ್ನ ಸಿನಿಮಾ ಸೆಟ್ನಲ್ಲಿ ಹ್ಯಾಂಡ್ ಪೇಂಟಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಟನೆ ಜೊತೆ ಕ್ರಿಕೆಟ್ ಕಲೆಯನ್ನು ಅಭ್ಯಸಿಸಿ ಸೈ ಎನಿಸಿಕೊಂಡಿದ್ದ ಅನುಷ್ಕಾಳಲ್ಲಿರುವ ಕಲಾ ಪ್ರತಿಭೆಗೆ ಅಭಿಮಾನಿಗಳು ಮನಸೋತಿದ್ದಾರೆ.
ಹಳದಿ ಬಣ್ಣದ ಲವ್ ಸಿಂಬಲ್ ಬಿಡಿಸಿರುವ ಅನುಷ್ಕಾ ಅದರೊಂದಿಗೆ ನಗುವ ಎಮೋಜಿಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅಂತಿಮವಾಗಿ ಅದನ್ನು ಪ್ಯಾಕಪ್ ಎಂದು ಬರೆಯಲಾಗಿದೆ. ನಟಿ ಕ್ಯಾನ್ವಾಸ್ ಮೇಲೆ ವಿವಿಧ ಬಣ್ಣಗಳನ್ನು ಬಳಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ಸ್ವತಃ ಅನುಷ್ಕಾ ಅವರೇ ಈ ವಿಡಿಯೋವನ್ನು ಹಂಚಿಕೊಂಡು ಇದೊಂದು ಮಾಸ್ಟರ್ ಪೀಸ್ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋ ನೋಡಿದ ಹಲವು ನೆಟ್ಟಿಗರು ಅನುಷ್ಕಾ ಅವರ ಪ್ರತಿಭೆಯನ್ನು, ಅನಿಲ್ ಕಪೂರ್ ಅವರ ‘ವೆಲ್ಕಮ್’ ಚಿತ್ರದ ಪಾತ್ರ ಮಜ್ನು ಭಾಯಿಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲಾ ಇದು ಮಜ್ನು ಭಾಯ್ ಅವರ ಮಾಸ್ಟರ್ ಪೀಸ್ ಗಿಂತಲೂ ಸುಂದರವಾಗಿದೆ ಎನ್ನುವ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
https://youtu.be/LmMLxafTawM