alex Certify ಸಿನಿಮಾ ಚಿತ್ರೀಕರಣದ ಬಳಿಕ ಈ ಖ್ಯಾತ ಪ್ರವಾಸಿ ಸ್ಥಳಗಳು ಮತ್ತಷ್ಟು ‌ʼಫೇಮಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಚಿತ್ರೀಕರಣದ ಬಳಿಕ ಈ ಖ್ಯಾತ ಪ್ರವಾಸಿ ಸ್ಥಳಗಳು ಮತ್ತಷ್ಟು ‌ʼಫೇಮಸ್ʼ

ನೀವು ಬಾಲಿವುಡ್‌ ಸಿನೆಮಾಗಳ ಅಭಿಮಾನಿಯಾಗಿದ್ರೆ, ಪ್ರೇಕ್ಷಕರಿಗೆ ಸುಂದರವಾದ ರಜಾದಿನಗಳ ಕನಸು ಕಾಣುವಂತೆ ಮಾಡಿದ ಸೊಗಸಾದ ಶೂಟಿಂಗ್ ಸ್ಥಳಗಳನ್ನು ಗಮನಿಸಿರಬಹುದು.

ಭಾರತದ ಈ ಶೂಟಿಂಗ್‌ ಸ್ಪಾಟ್‌ ಗಳಲ್ಲಿ ಸಿನೆಮಾಗಳಿಂದಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಅಂದ್ರೆ ತಪ್ಪಾಗಲಾರದು. ಆ ಸ್ಥಳಗಳು ಯಾವುದು ಅನ್ನೋದನ್ನು ನೋಡೋಣ.

ಈ ಸ್ಥಳಗಳು ಸಿನೆಮಾ ಚಿತ್ರೀಕರಣಗೊಳ್ಳುವ ಮೊದಲಿನಿಂದ್ಲೂ ವಿಶೇಷತೆಯನ್ನು ಹೊಂದಿವೆ. ಸಿನೆಮಾದಲ್ಲೂ ಕಾಣಿಸಿಕೊಂಡಿದ್ದರಿಂದ ಅವುಗಳ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಸಿನೆಮಾಗಳ ಪ್ರಮೋಷನ್‌ ಗೆ ನಟ, ನಟಿಯರು ಈ ಸ್ಥಳಕ್ಕೆ ಬಂದಿದ್ದರಿಂದ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಿವೆ.

ದಿ ಓಬೆರಾಯ್‌ ಉದರ್‌ ವಿಲ್ಲಾಸ್‌ –ರಾಜಸ್ತಾನದ ಉದಯ್ಪುರ

ಯೆ ಜವಾನಿ ಹೈ ದಿವಾನಿ ಚಿತ್ರದ ಅದಿತಿ ಮದುವೆ ನಿಮಗೆ ನೆನಪಿರಬೇಕಲ್ಲ. ರಾಜಸ್ತಾನದ ಉದಯ್ಪುರ ಬಳಿಯಿರೋ ಪಿಚೋಲಾ ಸರೋವರದ ದಡದಲ್ಲಿರೋ ಈ ವೈಭವಯುತ ಅರಮನೆಯಲ್ಲಿ ಆ ದೃಶ್ಯವನ್ನು ಚಿತ್ರೀಕರಿಸಲಾಗಿದೆ. 50 ಎಕರೆ ವಿಸ್ತಾರವಾಗಿರೋ ಇದು 20 ಎಕರೆ ಜಾಗದಲ್ಲಿ ವನ್ಯಜೀವಿ ಸಂರಕ್ಷಣಾ ವಲಯವನ್ನು ಹೊಂದಿದೆ.

ರೆಸಾರ್ಟ್‌ ನ ಅದ್ಧೂರಿ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ. ಗುಮ್ಮಟ ರಚನೆಗಳು, ಅಮೃತಶಿಲೆಯ ಮಂಟಪಗಳು ಮತ್ತು ಸೊಗಸಾದ ಕಲಾಕೃತಿಗಳನ್ನು ಹೊಂದಿರುವ ಅರಮನೆ ವಿವಾಹ ಮಹೋತ್ಸವ ಮತ್ತು ಮಧುಚಂದ್ರಕ್ಕೆ ಹೇಳಿ ಮಾಡಿಸಿದಂತಿದೆ.

ಟೀ ಎಸ್ಟೇಟ್ಸ್‌ : ಕೇರಳದ ಮುನ್ನಾರ್‌

ಕೇರಳ, ದಕ್ಷಿಣ ಭಾರತದ ಅತಿ ಸುಂದರ ಗಿರಿಧಾಮ. ಈ ಹಿಂದೆ ಬ್ರಿಟಿಷ್ ಸರ್ಕಾರದ ಅಧಿಕಾರಿಗಳಿಗೆ ಬೇಸಿಗೆಯಲ್ಲಿ ವಿಶ್ರಾಂತಿ ಸ್ಥಳವಾಗಿತ್ತು. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರೋ ಈ ತಾಣದಲ್ಲಿ ನೀವು ಛಾಯಾಚಿತ್ರಗಳಲ್ಲಿ ಸೆರೆಹಿಡಿಯಬಹುದಾದ ವಿಹಂಗಮ ನೋಟವಿದೆ. ಮುನ್ನಾರ್‌ನ ಚಹಾ ತೋಟಗಳ ಹಸಿರ ಸಿರಿಯಲ್ಲೇ ʼಚೆನ್ನೈ ಎಕ್ಸ್‌ ಪ್ರೆಸ್‌ʼ ಸೇರಿದಂತೆ ಬಾಲಿವುಡ್‌ ನ ಹಲವು ಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಈ ಸ್ಥಳ ಅಪರೂಪದ ಜಾತಿಯ ಪ್ರಾಣಿಗಳಿಗೂ ನೆಲೆಯನ್ನು ಕಲ್ಪಿಸಿಕೊಟ್ಟಿದೆ. ಆಯುರ್ವೇದ ಕೇಂದ್ರಗಳನ್ನು ಸಹ ಇಲ್ಲಿ ಕಾಣಬಹುದು. ಮನರಂಜನಾ ಚಟುವಟಿಕೆಗಳನ್ನು ಆನಂದಿಸಬಹುದು.

ರೋಹ್ಟಂಗ್‌ ಪಾಸ್‌ : ಹಿಮಾಚಲ ಪ್ರದೇಶದ ಮನಾಲಿ

13,000 ಅಡಿ ಎತ್ತರದಲ್ಲಿರುವ ರೋಹ್ಟಂಗ್‌ ಪಾಸ್‌ ಮನಾಲಿ ಅದ್ಭುತವಾದ ಪ್ರವಾಸಿ ತಾಣ. ಮನಾಲಿ-ಲೇಹ್ ಹೆದ್ದಾರಿಯಲ್ಲಿರೋ ಈ ಜಾಗಕ್ಕೆ ಏಪ್ರಿಲ್ ನಿಂದ ಸೆಪ್ಟೆಂಬರ್‌ ವರೆಗೂ ಪ್ರವಾಸಿಗರು ಭೇಟಿ ನೀಡಬಹುದು. ಹಿಮದಿಂದ ಆವೃತವಾದ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಶಾಹಿದ್‌ ಕಪೂರ್‌, ಕರೀನಾ ಕಪೂರ್‌ ಅಭಿನಯದ ʼಜಬ್ ವಿ ಮೆಟ್‌ʼ ಸಿನೆಮಾವನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

ಪಂಗೊಂಗ್‌ ತ್ಸೋ ಸರೋವರ : ಲಡಾಕ್‌

ʼ3 ಈಡಿಯಟ್ಸ್‌ʼ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕರೀನಾ ಕಪೂರ್ ಖಾನ್, ಅದ್ಭುತವಾದ ಸ್ಥಳವೊಂದರಲ್ಲಿ ಸ್ಕೂಟರ್‌ ಸವಾರಿ ಮಾಡಿದ್ದು ನಿಮಗೆ ನೆನಪಿರಬಹುದು. ಚಿತ್ರದ ಕೊನೆಯ ದೃಶ್ಯವನ್ನು ಲಡಾಕ್‌ ನ ಪಂಗೊಂಗ್‌ ಸರೋವರದ ಬಳಿ ಚಿತ್ರೀಕರಿಸಲಾಗಿದೆ.

ದಿಲ್ ಸೆ ಮತ್ತು ಜಬ್ ತಕ್ ಹೈ ಜಾನ್ ಚಿತ್ರಗಳ ಕೆಲವು ದೃಶ್ಯಗಳನ್ನು ಕೂಡ ಇಲ್ಲೇ ಚಿತ್ರೀಕರಿಸಲಾಗಿದೆ. ಏಕಾಂಗಿ ಪ್ರಯಾಣಿಕರಿಗೆ ಹೇಳಿ ಮಾಡಿಸಿದಂತಹ ಜಾಗ ಇದು. ಇಲ್ಲಿ ನಕ್ಷತ್ರ ವೀಕ್ಷಣೆಗೂ ವಿಶೇಷ ವ್ಯವಸ್ಥೆಯಿದೆ. ಪಂಗೊಂಗ್‌ ತ್ಸೋ, ಏಷ್ಯಾ ಖಂಡದ ಅತಿದೊಡ್ಡ ಉಪ್ಪುನೀರಿನ ಸರೋವರವಾಗಿದೆ.

ಗೋಲ್ಡನ್‌ ಟೆಂಪಲ್‌ : ಪಂಜಾಬ್‌ ನ ಅಮೃತಸರ

ಹಿಂದಿ ಚಲನಚಿತ್ರವು ಪಂಜಾಬಿ ಪಾತ್ರವನ್ನು ಹೊಂದಿದ್ದರೆ ಅದರಲ್ಲಿ ಅಮೃತಸರದ ಗೋಲ್ಡನ್‌ ಟೆಂಪಲ್‌ ನ ಒಂದು ನೋಟ ಇದ್ದೇ ಇರುತ್ತದೆ.  ಸಿಖ್ ಧರ್ಮದ ಅನುಯಾಯಿಗಳಿಗೆ ಇದು ಅತ್ಯಂತ ಪವಿತ್ರವಾದ ಸ್ಥಳ.

ಜಗತ್ತಿನ  ವಿವಿಧೆಡೆಯಿಂದ  ಬರುವ ಯಾತ್ರಾರ್ಥಿಗಳು, ಗುರುದ್ವಾರ ಸಂಕೀರ್ಣದ ಸುತ್ತಲಿನ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ ದರ್ಶನ ಪಡೆಯುತ್ತಾರೆ. ಮನ್ಮರ್ಜಿಯಾ, ರಬ್ ನೆ ಬನಾ ದಿ ಜೋಡಿ ಮತ್ತು ರಂಗ್ ದೇ ಬಸಂತಿ ಚಿತ್ರಗಳಲ್ಲಿ ನಿಮಗೂ ಕೂಡ ಗೋಲ್ಡನ್‌ ಟೆಂಪಲ್‌ ದರ್ಶನವಾಗಿರಬಹುದು.

ವಜಚಲ್ ಮತ್ತು ಅತಿರಪಲ್ಲಿ ಜಲಪಾತ: ತ್ರಿಶೂರ್, ಕೇರಳ

ಕಪ್ಪು ಮತ್ತು ಬೂದು ಬಣ್ಣದ ಬಂಡೆಗಳ ಮೇಲೆ ಹರಿಯುವ ನದಿಯ ಸುಂದರವಾದ ನೋಟ ಇಲ್ಲಿನ ವಿಶೇಷತೆ. ಬಾಲಿವುಡ್‌ ಮಾತ್ರವಲ್ಲದೆ ತಮಿಳು, ತುಳು ಮತ್ತು ಮಲಯಾಳಂ ಚಲನಚಿತ್ರಗಳನ್ನೂ ಇಲ್ಲಿ ಚಿತ್ರೀಕರಿಸಲಾಗಿದ್ದು, ಈ ಸುಂದರ ಸ್ಥಳ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ಇದನ್ನು ಭಾರತದ ನಯಾಗರವೆಂದೂ ಕರೆಯಲಾಗುತ್ತದೆ. ಸೂಪರ್‌ ಹಿಟ್‌ ಚಿತ್ರ ʼಬಾಹುಬಲಿʼಯ ಕೆಲವು ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...