
ಪ್ರಭಾಸ್ ಅಭಿನಯದ ‘ಆದಿಪುರುಷ್’ (Adipurush) ಚಿತ್ರದ ಪ್ರಿ-ರಿಲೀಸ್ ಈವೆಂಟ್ ನಿನ್ನೆ ತಿರುಪತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಂತಿಮ ಟ್ರೈಲರ್ ಅನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆಯಿದೆ.
ದಿ ಕಾಶ್ಮೀರ್ ಫೈಲ್ಸ್ ಮತ್ತು ಕಾರ್ತಿಕೇಯ 2 ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನಿರ್ಮಿಸಿದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ತೆಲಂಗಾಣದಾದ್ಯಂತದ ಎಲ್ಲಾ ಸರ್ಕಾರಿ ಶಾಲೆಗಳು, ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಿಗೆ ಆದಿಪುರುಷ್ ಚಿತ್ರದ 10,000 ಉಚಿತ ಟಿಕೆಟ್ ಗಳನ್ನು ನೀಡಲಿದ್ದಾರೆ. ಆಸಕ್ತ ಅರ್ಹರು ತಂಡವು ಒದಗಿಸಿದ ಗೂಗಲ್ ಫಾರ್ಮ್ (Google Form) ಅನ್ನು ಭರ್ತಿ ಮಾಡಬೇಕು.
ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೆಗಾ ಬಜೆಟ್ ಪೌರಾಣಿಕ ನಾಟಕವನ್ನು ಓಂ ರೌತ್ ನಿರ್ದೇಶಿಸಿದ್ದಾರೆ ಮತ್ತು ಟಿ-ಸೀರಿಸ್ ಮತ್ತು ರೆಟ್ರೋಫೈಲ್ಸ್ ನಿರ್ಮಿಸಿದ್ದಾರೆ. ಆದಿಪುರುಷ್ 2023 ರ ಜೂನ್ 16 ರಂದು ಚಿತ್ರಮಂದಿರಗಳಲ್ಲಿ( released)
ಬಿಡುಗಡೆಯಾಗಲಿದೆ.