ಕಲಬುರ್ಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬ ಕುಡುಕ. ಹೆಂಡ ಕುಡಿದಾಗ ಒಂದು ರೀತಿ ಕುಡಿಯದೇ ಇದ್ದಾಗ ಒಂದು ರೀತಿ ಮಾತನಾಡ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಒಬ್ಬ ಭಯೋತ್ಪಾದಕ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ. ಸಿದ್ದರಾಮಯ್ಯ ರಕ್ತದ ಕಣ ಕಣದಲ್ಲಿಯೂ ಮೋಸ ಇದೆ. ಮೊದಲು ಜೆಡಿಎಸ್ ಗೆ ಮೋಸ ಮಾಡಿದರು. ಈಗ ಕಾಂಗ್ರೆಸ್ ಗೂ ಮೋಸ ಮಾಡಲು ಹೊರಟಿದ್ದಾರೆ. ಇಂಥ ಮೋಸಗಾರ ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದರು.
ಮೊಬೈಲ್ ಬಳಸುವಾಗ ಎಚ್ಚರ…! ಇಲ್ಲಿದೆ ಚಿತ್ರವಿಚಿತ್ರ ಕಾನೂನು
ನಳೀನ್ ಕುಮಾರ್ ಕಟೀಲ್ ಓರ್ವ ದೇಶಭಕ್ತ. ಒಬ್ಬ ದೇಶ ಭಕ್ತರನ್ನು ಭಯೋತ್ಪಾದಕ ಎಂದು ಸಿದ್ದರಾಮಯ್ಯ ಕರೆದಿರುವುದು ಮಾಜಿ ಸಿಎಂ, ವಿಪಕ್ಷ ನಾಯಕರಿಗೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದರು.